ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪರವಾನಗಿ ರದ್ದು ಪಡಿಸಿದ ಆರ್ಬಿಐ

ಸಾಂದರ್ಭಿಕ ಚಿತ್ರ (PTI)
ಮುಂಬೈ: ಮಹಾರಾಷ್ಟ್ರದ ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ(Laxmi Co-operative Bank Limited) ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ರದ್ದುಗೊಳಿಸಿದೆ, ಸಂಸ್ಥೆಯಲ್ಲಿ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳಿಲ್ಲ ಹಾಗೂ ಅದು ನಿಯಮಗಳಿಗೆ ಬದ್ಧವಾಗಿಲ್ಲ ಎಂದು ಹೇಳಿದೆ.
ಆದೇಶ ಇಂದಿನಿಂದಲೇ ಜಾರಿಯಾಗಲಿದೆ ಎಂದು ndtv.com ವರದಿ ಮಾಡಿದೆ.
“ತಕ್ಷಣವೇ ಜಾರಿಗೆ ಬರುವಂತೆ ಮಹಾರಾಷ್ಟ್ರದ ಸೊಲ್ಲಾಪುರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗೆ, 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, ಸೆಕ್ಷನ್ 56, ಸೆಕ್ಷನ್ 5(ಬಿ) ಯಲ್ಲಿ ವಿವರಿಸಿರುವಂತೆ ಠೇವಣಿಗಳ ಸ್ವೀಕಾರ ಮತ್ತು ಠೇವಣಿಗಳ ಮರುಪಾವತಿಯನ್ನು ಒಳಗೊಂಡಿರುವ 'ಬ್ಯಾಂಕಿಂಗ್' ವ್ಯವಹಾರವನ್ನು ನಡೆಸುವುದನ್ನು ನಿಷೇಧಿಸಲಾಗಿದೆ” ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಸಂಹಕಾರ ಸಂಘಗಳ ಕಮಿಷನರ್ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ರಿಗೆ ಬ್ಯಾಂಕ್ ಅನ್ನು ಮುಚ್ಚುವ ಆದೇಶವನ್ನು ಹೊರಡಿಸಲು ಮತ್ತು ಬ್ಯಾಂಕ್ಗೆ ಲಿಕ್ವಿಡೇಟರ್ ಅನ್ನು ನೇಮಿಸುವಂತೆ ಆರ್ಬಿಐ ತಿಳಿಸಿದೆ.
ದಿವಾಳಿಯಾದ ಮೇಲೆ, ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಅಥವಾ ಡಿಐಸಿಜಿಸಿಯಿಂದ ₹ 5 ಲಕ್ಷದವರೆಗಿನ ಠೇವಣಿ ವಿಮೆಯ ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಆರ್ಬಿಐ ಹೇಳಿದೆ.
ಬ್ಯಾಂಕ್ ಸಲ್ಲಿಸಿದ ಮಾಹಿತಿಯ ಪ್ರಕಾರ, 99 ಪ್ರತಿಶತ ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಡಿಐಸಿಜಿಸಿಯಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ.
ಇದನ್ನೂ ಓದಿ: ಮಾಯಾ ಕೊಡ್ನಾನಿಗೆ ಗುಜರಾತ್ ಹೊರಗೆ ತೆರಳಲು ಮತ್ತೆ ಅನುಮತಿಸಿದ ನ್ಯಾಯಾಲಯ







