ಬೊಮ್ಮಾಯಿ ಆಡಳಿತದಿಂದ 'ಕರ್ನಾಟಕ ಮಾಡೆಲ್' ಇಂದು ವಿಶ್ವದ ಗಮನ ಸೆಳೆಯುತ್ತಿದೆ: ಬಿಜೆಪಿ
''ದೆಹಲಿಯನ್ನು ಕಲುಷಿತಗೊಳಿಸಿದ ಕೇಜ್ರಿವಾಲ್''

ಬೆಂಗಳೂರು: 'ಕರ್ನಾಟಕ ಮಾಡೆಲ್' ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದಿಂದ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಬಿಜೆಪಿ (BJP) ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ (BJP Karnataka), ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
''ದೆಹಲಿಯನ್ನು ಸ್ವಚ್ಛ ಮಾಡುತ್ತೇನೆ ಎಂದು ಪೊರಕೆ ಹಿಡಿದು ಬಂದ ಅರವಿಂದ ಕೇಜ್ರಿವಾಲ್ ಇಂದು "ಹೊಗೆ" ದೆಹಲಿಯನ್ನಾಗಿಸಿ ಕಲುಷಿತಗೊಳಿಸಿದ್ದಾರೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆಡಳಿತದ ನೀತಿಗಳಿಂದ ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸಿದ್ದಾರೆ. ಕರ್ನಾಟಕ ಮಾಡೆಲ್ ಇಂದು ವಿಶ್ವದ ಗಮನ ಸೆಳೆಯುತ್ತಿದೆ'' ಎಂದು ಕೇಜ್ರಿವಾಲ್ ಅವರ ಆಡಳಿತವನ್ನು ಟೀಕಿಸಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಆಫರ್ ನೀಡಿದೆ: ಅರವಿಂದ ಕೇಜ್ರಿವಾಲ್ ಆರೋಪ
ದೆಹಲಿಯನ್ನು ಸ್ವಚ್ಛ ಮಾಡುತ್ತೇನೆ ಎಂದು ಪೊರಕೆ ಹಿಡಿದು ಬಂದ @ArvindKejriwal ಇಂದು "ಹೊಗೆ" ದೆಹಲಿಯನ್ನಾಗಿಸಿ ಕಲುಷಿತಗೊಳಿಸಿದ್ದಾರೆ. ಕರ್ನಾಟಕದಲ್ಲಿ @BSBommai ಅವರು ತಮ್ಮ ಆಡಳಿತದ ನೀತಿಗಳಿಂದ ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸಿದ್ದಾರೆ. ಕರ್ನಾಟಕ ಮಾಡೆಲ್ ಇಂದು ವಿಶ್ವದ ಗಮನ ಸೆಳೆಯುತ್ತಿದೆ.#KejriwalFailsDelhi pic.twitter.com/qYFNQDZkPo
— BJP Karnataka (@BJP4Karnataka) November 5, 2022







