ತೀವ್ರ ಆರ್ಥಿಕ ಸಂಕಷ್ಟ: ಸೇನಾ ಸಿಬ್ಬಂದಿ ಕಡಿತಕ್ಕೆ ಶ್ರೀಲಂಕಾ ನಿರ್ಧಾರ

ಕೊಲಂಬೋ, ಜ.13: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾ (Sri Lanka), ತನ್ನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಸೇನೆಯ ಸಿಬಂದಿಗಳ ಪ್ರಮಾಣವನ್ನು ಮೂರನೇ ಒಂದರಷ್ಟು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವರು ಹೇಳಿದ್ದಾರೆ.
ಈಗ ಶ್ರೀಲಂಕಾದ ಸೇನೆಯಲ್ಲಿ 1,35,000 ಯೋಧರಿದ್ದು 2030ರ ವೇಳೆಗೆ ಈ ಪ್ರಮಾಣವನ್ನು 1 ಲಕ್ಷಕ್ಕೆ ಇಳಿಸಲಾಗುವುದು. ಮಿಲಿಟರಿ ವೆಚ್ಚವು ದೇಶದ ಖಜಾನೆಯ ಮೇಲೆ ಹೆಚ್ಚಿನ ಹೊರೆಯಾಗಿರುವುದರಿಂದ ಈ ಹೊರೆಯನ್ನು ಸ್ವಲ್ಪ ಕಡಿಮೆಗೊಳಿಸುವ ಮೂಲಕ ವೆಚ್ಚಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವ ಪ್ರೇಮಿತ ಬಂಡಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಶಾಲೆಗಳಲ್ಲಿ ‘ಸರ್’, ‘ಮೇಡಮ್’ ಎನ್ನುವಂತಿಲ್ಲ; ‘ಟೀಚರ್’ ಮಾತ್ರ: ಕೇರಳ ಮಕ್ಕಳ ಹಕ್ಕುಗಳ ಆಯೋಗ
Next Story