Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು...

ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು 'ಬಲಿಪಶು'ವಾಗಿದೆ: ಸಿಜೆಐ ಚಂದ್ರಚೂಡ್

4 March 2023 1:40 PM IST
share
ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು ಬಲಿಪಶುವಾಗಿದೆ: ಸಿಜೆಐ ಚಂದ್ರಚೂಡ್

ಹೊಸದಿಲ್ಲಿ: ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು 'ಬಲಿಪಶು'ವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.  

ಜನರಲ್ಲಿ ತಾಳ್ಮೆ ಮತ್ತು ಸಹಿಷ್ಣುತೆ ಕೊರತೆ ಇರುವ ಯುಗದಲ್ಲಿ ನಾವು ಇಂದು ಬದುಕುತ್ತಿದ್ದೇವೆ. ತಮ್ಮ ದೃಷ್ಟಿಕೋನದಿಂದ ಭಿನ್ನವಾದ ದೃಷ್ಟಿಕೋನಗಳನ್ನು ಸ್ವೀಕರಿಸಲು ಜನರು ಸಿದ್ಧರಿಲ್ಲ ಎಂದು ಚಂದ್ರಚೂಡ್ ಹೇಳಿದರು.

ಅಮೇರಿಕನ್ ಬಾರ್ ಅಸೋಸಿಯೇಷನ್ ಇಂಡಿಯಾ ಕಾನ್ಫರೆನ್ಸ್ 2023 ರಲ್ಲಿ "ಜಾಗತೀಕರಣದ ಯುಗದಲ್ಲಿ ಕಾನೂನು: ಭಾರತ ಮತ್ತು ಪಶ್ಚಿಮದ ಒಮ್ಮುಖ" ವಿಷಯದ ಕುರಿತು ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು  ತಂತ್ರಜ್ಞಾನ ಮತ್ತು ನ್ಯಾಯಾಂಗದ ಬಳಕೆ ಸೇರಿದಂತೆ, COVID-19 ಸಾಂಕ್ರಾಮಿಕ ಸಮಯದ ಬಳಿಕ ನ್ಯಾಯಾಂಗ ವೃತ್ತಿಯನ್ನು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು. 

“ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು ಬಲಿಪಶುವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ  ಹರಡುವುದನ್ನು ತರ್ಕಬದ್ಧ ವಿಜ್ಞಾನದ ಓರೆಗಲ್ಲಲ್ಲಿ ಎಂದಿಗೂ ಪರೀಕ್ಷಿಸಲಾಗುತ್ತಿಲ್ಲ”ಎಂದು ಅವರು ಹೇಳಿದರು.
 
ಜಾಗತೀಕರಣದ ಯುಗಕ್ಕೆ ಮುನ್ನುಗ್ಗುವ ಮೊದಲೇ ಭಾರತೀಯ ಸಂವಿಧಾನವು ಹಲವು ವಿಧಗಳಲ್ಲಿ ಜಾಗತೀಕರಣಗೊಂಡಿರುವ ಪ್ರಮುಖ ಉದಾಹರಣೆಯಿದೆ. ಸಂವಿಧಾನವನ್ನು ರಚಿಸುವಾಗ, ಅದರ ರಚನೆಕಾರರಿಗೆ ಮಾನವೀಯತೆಯು ವಿಕಸನಗೊಳ್ಳುವ ರೇಖೆಗಳ ಬಗ್ಗೆ ಪ್ರಾಯಶಃ ಕಲ್ಪನೆಯಿರಲಿಲ್ಲ ಎಂದು ಅವರು ಹೇಳಿದರು.

“ನಾವು ಖಾಸಗಿತನದ ಕಲ್ಪನೆಗಳನ್ನು ಹೊಂದಿರಲಿಲ್ಲ, ಇಂಟರ್ನೆಟ್ ಇರಲಿಲ್ಲ. ಅಲ್ಗಾರಿದಮ್‌ಗಳಿಂದ ನಿಯಂತ್ರಿಸಲ್ಪಡುವ ಜಗತ್ತಿನಲ್ಲಿ ನಾವು ವಾಸಿಸಲಿಲ್ಲ. ನಾವು ಖಂಡಿತವಾಗಿಯೂ ಸಾಮಾಜಿಕ ಮಾಧ್ಯಮವನ್ನು ಹೊಂದಿರಲಿಲ್ಲ, ” ಎಂದು ಅವರು ಹೇಳಿದರು.

"ನಾವು ಮಾಡುವ ಪ್ರತಿಯೊಂದು ಸಣ್ಣ ವಿಷಯಕ್ಕೂ, ನಮ್ಮ ದೃಷ್ಟಿಕೋನವನ್ನು ಒಪ್ಪದ ಯಾರಿಂದಲೋ ಟ್ರೋಲ್ ಗೆ ಒಳಗಾಗುವ ಬೆದರಿಕೆಯನ್ನು ನಾವು ಎದುರಿಸುತ್ತೇವೆ, ನನ್ನನ್ನು ನಂಬಿ, ನ್ಯಾಯಾಧೀಶರೂ ಇದರಿಂದ ಹೊರತಲ್ಲ" ಎಂದು ಸಿಜೆಐ ಹೇಳಿದರು. 

“ಪ್ರಯಾಣ ಮತ್ತು ತಂತ್ರಜ್ಞಾನದ ಜಾಗತಿಕ ಆಗಮನದೊಂದಿಗೆ ಮಾನವೀಯತೆಯು ವಿಸ್ತರಿಸಿದಂತೆಯೇ, ಜನರು, ವ್ಯಕ್ತಿಗಳಾಗಿ, ತಮ್ಮದಲ್ಲದ ದೃಷ್ಟಿಕೋನದ ಯಾವುದನ್ನೂ ಸ್ವೀಕರಿಸಲು ಸಿದ್ಧರಿಲ್ಲದ ಮೂಲಕ ಮಾನವೀಯತೆಯು ಹಿಮ್ಮೆಟ್ಟಿದೆ” ಎಂದು ಅವರು ಹೇಳಿದರು.

" ಇದು ನಮ್ಮ ಕಾಲದ ಸವಾಲು ಎಂದು ನಾನು ನಂಬುತ್ತೇನೆ. ಇವುಗಳಲ್ಲಿ ಕೆಲವು ಬಹುಶಃ ತಂತ್ರಜ್ಞಾನದ ಕೊಡುಗೆಯೂ ಹೌದು, ”ಎಂದು ಅವರು ಹೇಳಿದರು.

ಇದನ್ನು ಓದಿ: ವೇದಗಳಲ್ಲಿ ದನ ಕೊಂದವರು ನರಕದಲ್ಲಿ ಬೇಯುತ್ತಾರೆಂದು ಹೇಳಿದೆ, ಸರಕಾರ ಗೋಹತ್ಯೆ ನಿಷೇಧಿಸಬೇಕು: ಅಲಹಾಬಾದ್‌ ಹೈಕೋರ್ಟ್‌

share
Next Story
X