ವಿಟ್ಲ | ದ್ವಿಚಕ್ರ ವಾಹನಕ್ಕೆ ಬೋರ್ ವೆಲ್ ಲಾರಿ ಢಿಕ್ಕಿ: ಯುವಕ ಮೃತ್ಯು

ವಿಟ್ಲ, ಮಾ.18: ಕೊಳವೆಬಾವಿ ಕೊರೆಯುವ (ಬೋರುವೆಲ್ ಲಾರಿ) ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೇಟೆ ಹೊರವಲಯದ ಕಾಶೀಮಠ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಉಕ್ಕುಡ ಆಲಂಗಾರು ನಿವಾಸಿ ರಂಜಿತ್(20) ಮೃತಪಟ್ಟವರು.
ರಂಜಿತ್ ತನ್ನ ದ್ವಿಚಕ್ರ ವಾಹನದಲ್ಲಿ ವಿಟ್ಲ ಕಡೆಯಿಂದ ಉಕ್ಕುಡದತ್ತ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಬೋರ್ ವೆಲ್ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ರಂಜಿತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಹಸವಾರ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು | ನಂತೂರಿನಲ್ಲಿ ಸ್ಕೂಟರ್ ಗೆ ಟಿಪ್ಪರ್ ಢಿಕ್ಕಿ: ಇಬ್ಬರು ಮೃತ್ಯು
Next Story









