IPL ಪಂದ್ಯದ ನಂತರ ಪರಸ್ಪರ ಕೈಕುಲುಕದ ವಿರಾಟ್ ಕೊಹ್ಲಿ, ಸೌರವ್ ಗಂಗುಲಿ: ವೀಡಿಯೊ ವೈರಲ್

ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಶನಿವಾರ ರಾತ್ರಿ ಹೈವೋಲ್ಟೇಜ್ ಐಪಿಎಲ್ (IPL) ಪಂದ್ಯ ಮುಕ್ತಾಯದ ನಂತರ ಆರ್‌ಸಿಬಿಯ (RCB) ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾದ ಸೌರವ್ ಗಂಗುಲಿ (Sourav Ganguly) ಪರಸ್ಪರ ಕೈಕುಲಕಲಿಲ್ಲ ಎನ್ನಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಡೆಲ್ಲಿ ವಿರುದ್ಧ ಶನಿವಾರ ಆರ್‌ಸಿಬಿ 23 ರನ್‌ನಿಂದ ಗೆಲುವು ಸಾಧಿಸಲು ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೆಕೆಆರ್ ಹಾಗೂ ಲಕ್ನೊ ವಿರುದ್ಧ ಸೋತಿದ್ದ ಆರ್‌ಸಿಬಿ ಈ ಪಂದ್ಯದಲ್ಲಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು.
ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸಾಲಾಗಿ ನಿಂತು ಕ್ರೀಡಾಸ್ಫೂರ್ತಿ ಪ್ರದರ್ಶಿಸಲು ಕೈಕುಲುಕಿದ್ದಾರೆ. ಆದರೆ ಕೊಹ್ಲಿ ಹಾಗೂ ಗಂಗುಲಿ ಕೈ ಕುಲುಕದೆ ಇರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊಹ್ಲಿ ಅವರು ಸರದಿ ಸಾಲಿನಲ್ಲಿದ್ದ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಜೊತೆ ಸಂಭಾಷಣೆ ನಡೆಸುತ್ತಿದ್ದಾಗ ಸರದಿ ಸಾಲಿನಲ್ಲಿ ಕೊಹ್ಲಿಯವರನ್ನು ಬಿಟ್ಟು ಮುಂದಕ್ಕೆ ಸಾಗಿದ್ದ ಗಂಗುಲಿ ಇತರ ಆಟಗಾರರ ಕೈಕುಲುಕಿದರು. ಈ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಅಭಿಮಾನಿಗಳು, ಕೊಹ್ಲಿ ಅವರು ಉದ್ದೇಶಪೂರ್ವಕವಾಗಿ ಗಂಗುಲಿಯವರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರೆ, ಆರ್‌ಸಿಬಿ ಬ್ಯಾಟರ್ ಕೊಹ್ಲಿ ಅವರು ಪಾಂಟಿಂಗ್‌ರೊಂದಿಗೆ ಸಂಭಾಷಣೆ ನಡೆಸಿದ್ದು, ಕಾಕತಾಳೀಯ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟರು.
ಗಂಗುಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಇಬ್ಬರು ಭಾರತದ ಮಾಜಿ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ ನಂತರ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆ ಬಳಿಕ ಇಬ್ಬರ ನಡುವೆ ಭಿನ್ನಮತ ಕಾಣಿಸಿಕೊಂಡಿತ್ತು. ನಾಯಕತ್ವ ತ್ಯಜಿಸದಂತೆ ನಾನು ಕೊಹ್ಲಿಗೆ ಹೇಳಿದ್ದೆ ಎಂದು ಗಂಗುಲಿ ತಿಳಿಸಿದ್ದರು. ಟಿ-20 ನಾಯಕನಾಗಿ ಮುಂದುವರಿಯಲು ನನಗೆ ಯಾರೂ ಕೇಳಿಕೊಂಡಿರಲಿಲ್ಲ ಎಂದು ಕೊಹ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಐಪಿಎಲ್: ಡೆಲ್ಲಿ ವಿರುದ್ಧ ಆರ್‌ಸಿಬಿಗೆ 23 ರನ್ ಜಯ
More than kohli ignoring ganguly , ganguly went ahead I guess . I think ponting was saying something to him https://t.co/Bcxd4bBpRq
— Aryan (@SQD05) April 15, 2023







