ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ 'ಪಠಾಣ್': 3 ವಾರಗಳಲ್ಲಿ 980 ಕೋಟಿ ರೂ. ಗಳಿಕೆ
ಹೊಸದಿಲ್ಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಲನಚಿತ್ರ ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.
ಒಂದು ಅಂದಾಜಿನ ಪ್ರಕಾರ ಬಿಡುಗಡೆಯಾಗಿ 24ನೇ ದಿನಂದು ಪಠಾಣ್ ರೂ. 2.50 ಕೋಟಿ ಗಳಿಸಿದ್ದರೆ ಇನ್ನೊಂದು ಮೂಲದ ಪ್ರಕಾರ ಆ ದಿನದ ಗಳಿಗೆ ರೂ. 1.01 ಕೋಟಿ ಆಗಿತ್ತು. ಹೊಸ ಚಲನಚಿತ್ರಗಳು ಬಿಡುಗಡೆಗೊಂಡಿರುವುದರಿಂದ ಪಠಾಣ್ ಗಳಿಕೆ ಕಡಿಮೆಯಾಗಿರಬಹುದೆಂದೂ ಹೇಳಲಾಗುತ್ತಿದೆ.
ಒಟ್ಟು ಮೂರು ವಾರಗಳಲ್ಲಿ ಪಠಾಣ್ ಜಾಗತಿಕವಾಗಿ ರೂ. 980 ಕೋಟಿ ಗಳಿಸಿದೆ. ಇಂಗ್ಲೆಂಡಿನಲ್ಲಿ ಚಿತ್ರದ ಗಳಿಕೆ 40 ಲಕ್ಷ ಡಾಲರ್ ತಲುಪಿದ್ದರೆ, ಗಲ್ಫ್ನಲ್ಲಿ ಚಿತ್ರ 1.3 ಕೋಟಿ ಡಾಲರ್ ಗಳಿಸಿದೆ.
ಚಿತ್ರದ ತಮಿಳು ಮತ್ತು ತೆಲುಗು ಅವತರಣಿಕೆಗಳು ಇಲ್ಲಿಯ ತನಕ ರೂ 17.70 ಕೋಟಿ ಗಳಿಸಿವೆ.
ಇದನ್ನೂ ಓದಿ: 'ಮಿರ್ಝಾಪುರ್' ಖ್ಯಾತಿಯ ನಟ ಶಹನವಾಝ್ ಪ್ರಧಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಸಿದು ಬಿದ್ದು ಮೃತ್ಯು
Next Story