LIVE | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ

ಹೊಸದಿಲ್ಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರಕಾರದ ಮೊದಲ ಬಜೆಟ್ ಅನ್ನು ಮಂಡಿಸುತ್ತಿದೆ. ಆಂಧ್ರ ಪ್ರದೇಶಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ
Live Updates
- 23 July 2024 11:21 AM IST
ಎಲ್ಲಾ ಕ್ಷೇತ್ರಗಳಲ್ಲಿ ಹೊಸದಾಗಿ ಉದ್ಯೋಗಿಗಳಿಗೆ ಪ್ರವೇಶಿಸುವ ಎಲ್ಲಾ ಜನರಿಗೆ ಸರ್ಕಾರ 1 ತಿಂಗಳ ವೇತನವನ್ನು ಇಪಿಎಫ್ ಮೂಲಕ ನೀಡುವ ಯೋಜನೆ ಘೋಷಣೆ
- 23 July 2024 11:13 AM IST
4.1 ಕೋಟಿ ಯುವಕರಿಗೆ ಉದ್ಯೋಗ ಮತ್ತು ಕೌಶಲ್ಯದ 5 ಯೋಜನೆಗಳಿಗಾಗಿ ಎರಡು ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ
- 23 July 2024 11:10 AM IST
ಉದ್ಯೋಗ, ಕೌಶಲ್ಯ, ಎಂಎಸ್‌ಎಂಇಗಳು, ಮಧ್ಯಮ ವರ್ಗದವರ ಮೇಲೆ ಈ ಬಜೆಟ್ ಕೇಂದ್ರೀಕರಿಸಲಿದೆ : ನಿರ್ಮಲಾ ಸೀತಾರಾಮನ್
- 23 July 2024 11:05 AM IST
ಸತತ 7 ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- 23 July 2024 11:04 AM IST
ಬಜೆಟ್ ಮಂಡನೆ ಆರಂಭ
- 23 July 2024 10:47 AM IST
ಬಜೆಟ್ ಮಂಡನೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿ
Next Story





