LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿಯ ಕಮಲ ಅರಳಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಬಿಆರ್‌ಸಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಆ ಮೂಲಕ ತೆಲಂಗಾಣದ ಇತಿಹಾಸದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ. ಕೆಸಿಆರ್ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ವಾರ್ತಾಭಾರತಿ ಲೈವ್ ಅಪ್‌ಡೇಟ್ ನಿರೀಕ್ಷಿಸಿ....
Live Updates
- 3 Dec 2023 8:48 AM IST
ತೆಲಂಗಾಣದಲ್ಲಿ ಕೈ ಹಿಡಿಯುವರೇ ಮತದಾರರು? ಕಾಂಗ್ರೆಸ್ 37 ಕ್ಷೇತ್ರದಲ್ಲಿ ಮುನ್ನಡೆ. ಬಿ ಆರ್ ಎಸ್ 18, ಬಿಜೆಪಿ 9, ಎಐಎಂಎಂ 1 ಕ್ಷೇತ್ರದಲ್ಲಿ ಮುನ್ನಡೆ
- 3 Dec 2023 8:46 AM IST
ಛತ್ತೀಸ್ ಗಡದಲ್ಲಿ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್. ಬಿಜೆಪಿ 25 ಕ್ಷೇತ್ರಗಳಲ್ಲಿ ಮುನ್ನಡೆ
- 3 Dec 2023 8:43 AM IST
ರಾಜಸ್ಥಾನದಲ್ಲಿ 42 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ. ಬಿಜೆಪಿ 37, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ
- 3 Dec 2023 8:41 AM IST
ಮಧ್ಯಪ್ರದೇಶದಲ್ಲಿ ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ. ಕಾಂಗ್ರೆಸ್ 27, ಬಿಎಸ್‌ಪಿ, ಇತರರು 1 ಕ್ಷೇತ್ರದಲ್ಲಿ ಮುನ್ನಡೆ





