LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿಯ ಕಮಲ ಅರಳಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಬಿಆರ್‌ಸಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಆ ಮೂಲಕ ತೆಲಂಗಾಣದ ಇತಿಹಾಸದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ. ಕೆಸಿಆರ್ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ವಾರ್ತಾಭಾರತಿ ಲೈವ್ ಅಪ್‌ಡೇಟ್ ನಿರೀಕ್ಷಿಸಿ....
Live Updates
- 3 Dec 2023 9:39 AM IST
ಮಧ್ಯಪ್ರದೇಶ : ಬಿಜೆಪಿ ಪೂರ್ಣ ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸಲಿದೆ ; ಸಿಎಂ ಶಿವರಾಜ್ ಸಿಂಗ್ ಚೌಹಾಣ್
- 3 Dec 2023 9:29 AM IST
ರಾಜಸ್ಥಾನ: "ಜನರಿಗೆ ಪ್ರಧಾನಿ ಮೋದಿ ಮೇಲೆ ನಂಬಿಕೆ ಇದೆ" ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಸಿಪಿ ಜೋಶಿ ಹೇಳಿದ್ದಾರೆ.
ಮೋದಿ ಅವರಿಗಿರುವ ಸಮರ್ಪಣಾ ಮನೋಭಾವ ಯಾವ ನಾಯಕನಲ್ಲೂ ಇಲ್ಲ. ಅವರ ನಾಯಕತ್ವವೇ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದ್ದಾರೆ.
- 3 Dec 2023 9:08 AM IST
ತೆಲಂಗಾಣ : ಒಟ್ಟು 119 ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್. 63 ಕ್ಷೇತ್ರಗಳಲ್ಲಿ ಮುನ್ನಡೆ.
- 3 Dec 2023 9:05 AM IST
ಮಧ್ಯಪ್ರದೇಶ - ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣ - ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮುನ್ನಡೆ
- 3 Dec 2023 9:03 AM IST
ತೆಲಂಗಾಣ : ಗಜ್ವೆಲ್‌ನಲ್ಲಿ ಕೆಸಿಆರ್ ಮುನ್ನಡೆ, ಕಾಮರೆಡ್ಡಿಯಲ್ಲಿ ಹಿನ್ನಡೆ. ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿರುವ ಕೆಸಿಆರ್
- 3 Dec 2023 9:01 AM IST
ರಾಜಸ್ಥಾನ : ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ. ಬಿಜೆಪಿ 77, ಕಾಂಗ್ರೆಸ್ 65 ಕ್ಷೇತ್ರದಲ್ಲಿ ಮುನ್ನಡೆ





