LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿಯ ಕಮಲ ಅರಳಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಬಿಆರ್‌ಸಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಆ ಮೂಲಕ ತೆಲಂಗಾಣದ ಇತಿಹಾಸದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ. ಕೆಸಿಆರ್ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ವಾರ್ತಾಭಾರತಿ ಲೈವ್ ಅಪ್‌ಡೇಟ್ ನಿರೀಕ್ಷಿಸಿ....
Live Updates
- 3 Dec 2023 5:23 PM IST
ಛತ್ತೀಸ್‌ಗಡ : ಅಂಬಿಕಾಪುರ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗೆ ಸೋಲು. ಬಿಜೆಪಿ ಅಭ್ಯರ್ಥಿ ರಾಜೇಶ್ ಅಗರ್ವಾಲ್ ಗೆ ಗೆಲುವು
- 3 Dec 2023 5:08 PM IST
ತೆಲಂಗಾಣ : ಇವಿಎಂ ದೋಷ, 11 ಸುತ್ತಿನ ಮತ ಎಣಿಕೆ ನಂತರ ಹೈದರಾಬಾದ್ ಜುಬ್ಲಿಹಿಲ್ಸ್ ಕ್ಷೇತ್ರದ ಮತ ಎಣಿಕೆ ಸ್ಥಗಿತ
- 3 Dec 2023 4:51 PM IST
ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು : ತೆಲಂಗಾಣ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ
- 3 Dec 2023 4:41 PM IST
"ರಾಜಸ್ಥಾನದ ಜನರು ನೀಡಿದ ಜನಾದೇಶವನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತೇವೆ. ಇದು ಅನಿರೀಕ್ಷಿತ ಫಲಿತಾಂಶ..." : ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್
- 3 Dec 2023 4:38 PM IST
ಛತ್ತೀಸ್‌ಗಡ: ರಾಯ್ಪುರದ ಧರ್ಶಿವಾ ಕ್ಷೇತ್ರದಿಂದ ಬಿಜೆಪಿಯಿಂದ ಛಾಲಿವುಡ್ ಸೂಪರ್‌ಸ್ಟಾರ್ ಅನುಜ್ ಶರ್ಮಾ ದಾಖಲೆಯ ಗೆಲುವು
- 3 Dec 2023 4:19 PM IST
"ಸೋಲು ತಾತ್ಕಾಲಿಕ, ಈ ಹಿನ್ನಡೆಗಳನ್ನು ನಿವಾರಿಸುತ್ತೇವೆ": ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ





