LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿಯ ಕಮಲ ಅರಳಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಬಿಆರ್‌ಸಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಆ ಮೂಲಕ ತೆಲಂಗಾಣದ ಇತಿಹಾಸದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ. ಕೆಸಿಆರ್ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ವಾರ್ತಾಭಾರತಿ ಲೈವ್ ಅಪ್‌ಡೇಟ್ ನಿರೀಕ್ಷಿಸಿ....
Live Updates
- 3 Dec 2023 3:11 PM IST
ತೆಲಂಗಾಣ : ಗೋಶಾಮಹಲ್ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜಾ ಸಿಂಗ್ ಗೆ ಹ್ಯಾಟ್ರಿಕ್ ಗೆಲುವು
- 3 Dec 2023 1:33 PM IST
ರಾಜಸ್ಥಾನ : ಸರ್ದಾಪುರದಲ್ಲಿ ಗೆಲುವಿನ ನಗೆ ಬೀರಿದ ಅಶೋಕ್ ಗೆಹ್ಲೋಟ್
- 3 Dec 2023 1:10 PM IST
ತೆಲಂಗಾಣ : ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮುಹಮ್ಮದ್ ಅಝರುದ್ದೀನ್ ಗೆ ಹಿನ್ನಡೆ
- 3 Dec 2023 12:48 PM IST
ಮಧ್ಯಪ್ರದೇಶ : ಫಲಿತಾಂಶ ನಿರಾಶಾದಾಯಕ. 'ಲಾಡ್ಲಿ ಬೆಹ್ನಾ ಯೋಜನೆ'ಯನ್ನು ನಾವು ಕಡೆಗಣಿಸಿದೆವು : ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ
Next Story





