Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2024ರಲ್ಲಿ ಎನ್‌.ಚಂದ್ರಬಾಬು ನಾಯ್ಡು...

2024ರಲ್ಲಿ ಎನ್‌.ಚಂದ್ರಬಾಬು ನಾಯ್ಡು ಗೆಲುವಿಗಾಗಿ ಸಂಜೆ 6 ಗಂಟೆಯ ನಂತರ ನಂಬಲಸಾಧ್ಯವಾದ ಮತದಾನ ದಾಖಲಿಸಿದ ಚುನಾವಣಾ ಆಯೋಗ; ನಂತರ ತನಿಖೆಯನ್ನೇ ನಡೆಸಲಿಲ್ಲ!

ವರದಿ: ಸುಮೇಧಾ ಮಿತ್ತಲ್ ಮತ್ತು ವೆಂಕಟೇಶ್ ನಾಯಕ್ / The Reporters' Collective

ಸುಮೇಧಾ ಮಿತ್ತಲ್ಸುಮೇಧಾ ಮಿತ್ತಲ್ವೆಂಕಟೇಶ್ ನಾಯಕ್ವೆಂಕಟೇಶ್ ನಾಯಕ್23 Nov 2026 8:30 AM IST
share
2024ರಲ್ಲಿ ಎನ್‌.ಚಂದ್ರಬಾಬು ನಾಯ್ಡು ಗೆಲುವಿಗಾಗಿ ಸಂಜೆ 6 ಗಂಟೆಯ ನಂತರ ನಂಬಲಸಾಧ್ಯವಾದ ಮತದಾನ ದಾಖಲಿಸಿದ ಚುನಾವಣಾ ಆಯೋಗ; ನಂತರ ತನಿಖೆಯನ್ನೇ ನಡೆಸಲಿಲ್ಲ!

ಚಿತ್ತೂರು ಲೋಕಸಭಾ ಕ್ಷೇತ್ರದಲ್ಲಿ ಸಂಜೆ 6 ಗಂಟೆಯ ನಂತರ 56,067 ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ಆಂತರಿಕ ದಾಖಲೆಗಳು ಲೆಕ್ಕ ಹಾಕಿವೆ. ಆದರೆ ಇದೇ ಚಿತ್ತೂರು ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 24,596 ಮಂದಿ ಮಾತ್ರ ಮತ ಹಾಕಿದ್ದಾರೆ ಎಂದು ದಾಖಲಾಗಿದೆ. ಹಿಂಸಾಚಾರದಿಂದ ಕೂಡಿದ್ದ ಈ ಚುನಾವಣೆಯಲ್ಲಿ, 31,000ಕ್ಕೂ ಹೆಚ್ಚು ಮತದಾರರ ಈ ಭಾರೀ ವ್ಯತ್ಯಾಸದ ಬಗ್ಗೆ ಆಯೋಗವು ತನಿಖೆಯನ್ನೇ ನಡೆಸಲಿಲ್ಲ.

The Reporters' Collective ನಲ್ಲಿ ಪ್ರಕಟವಾಗಿರುವ ಇದರ ಮೂಲ ಇಂಗ್ಲಿಷ್ ವರದಿಯ ಲಿಂಕ್ ಇಲ್ಲಿದೆ :

https://www.reporters-collective.in/election-audit-series/eci-chittoor-voter-slips-chandrababu-naidu-2024-elections

ಹೊಸದಿಲ್ಲಿ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸಂಜೆ 6 ಗಂಟೆಯ ನಂತರ ಮತದಾನ ಮಾಡಿದವರ ಸಂಖ್ಯೆಯ ಕುರಿತು ಚುನಾವಣಾ ಅಧಿಕಾರಿಗಳು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಒಂದು ದಿನದ ಅಂತರದಲ್ಲಿ ಕಳುಹಿಸಿದ ಎರಡು ಪ್ರತ್ಯೇಕ ವರದಿಗಳಲ್ಲಿ ಭಾರೀ ವ್ಯತ್ಯಾಸವಿರುವುದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ತನಿಖೆಯಿಂದ ಬೆಳಕಿಗೆ ಬಂದಿದೆ.

ಒಂದು ವರದಿಯಲ್ಲಿ, ಕತ್ತಲಾದ ನಂತರ 56,067 ಮತದಾರರು ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮತ್ತೊಂದು ವರದಿಯಲ್ಲಿ ಕೇವಲ 24,596 ಮತದಾರರು ಮಾತ್ರ ತಡರಾತ್ರಿಯವರೆಗೆ ನಿಂತು ಮತದಾನ ಮಾಡಿದ್ದಾರೆ ಎಂದು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

31,000ಕ್ಕೂ ಹೆಚ್ಚು ಮತದಾರರ ಈ ಭಾರೀ ವ್ಯತ್ಯಾಸವು ಚುನಾವಣಾ ಆಯೋಗದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಬೇಕಿತ್ತು. ವಿದ್ಯುನ್ಮಾನ ಮತಯಂತ್ರಗಳ (EVM) ದೋಷ ಮತ್ತು ಹಿಂಸಾಚಾರದಿಂದಾಗಿ ತಡರಾತ್ರಿಯವರೆಗೂ ಮತದಾನ ಮುಂದುವರಿದಿತ್ತು, ಒಂದು ಪ್ರಕರಣದಲ್ಲಿ ಮಧ್ಯರಾತ್ರಿ 2 ಗಂಟೆಯವರೆಗೂ ಮತದಾನ ನಡೆದಿತ್ತು ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ (CEO) ಒಪ್ಪಿಕೊಂಡಿದ್ದಾರೆ. ತಡರಾತ್ರಿಯವರೆಗೂ ನಡೆದ ಈ ಅಸಹಜ ಮತದಾನವು ವ್ಯವಸ್ಥಿತ ಅಕ್ರಮದ ಸ್ಪಷ್ಟ ಸಂಕೇತವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಕಾಣೆಯಾದ ಈ ಮತದಾರರ ಲೆಕ್ಕವು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ತೆಲುಗು ದೇಶಂ ಪಕ್ಷದ (TDP) ಎನ್. ಚಂದ್ರಬಾಬು ನಾಯ್ಡು ಅವರು ಚಿತ್ತೂರಿನ ಕುಪ್ಪಂ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದರು. ಚಿತ್ತೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕುಪ್ಪಂ ಕೂಡ ಒಂದಾಗಿದೆ. 2024ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದಾಗ, ಟಿಡಿಪಿಯು ಲೋಕಸಭಾ ಸ್ಥಾನದ ಜೊತೆಗೆ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳನ್ನೂ ಗೆದ್ದುಕೊಂಡಿತ್ತು.

► https://www.reporters-collective.in/election-audit-series/eci-no-record-voters-after-5-pm-2024-elections

►https://www.varthabharati.in/vishesha-varadigalu/election-commission-has-no-record-of-voter-turnout-after-5-pm-in-200-constituencies-during-2024-polls-2291621

ಸಂಭಾವ್ಯ ಮತದಾನ ಅಕ್ರಮಗಳ ಬಗ್ಗೆ ಎಚ್ಚರಿಕೆ ನೀಡಬೇಕಿದ್ದ ಈ ವರದಿಗಳು ಭಾರತೀಯ ಚುನಾವಣಾ ಆಯೋಗದ ಕತ್ತಲ ಕೋಣೆಯಲ್ಲಿ ಕಳೆದುಹೋಗಿವೆ ಎಂಬುದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ. ಈ ವರದಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. 'ದಿ ಕಲೆಕ್ಟಿವ್' ತಂಡವು ಇವುಗಳನ್ನು ಪಡೆದು ವಿಶ್ಲೇಷಣೆ ನಡೆಸಿದೆ. ಇದು ನಮ್ಮ 'ಚುನಾವಣಾ ಲೆಕ್ಕಪರಿಶೋಧನೆ' (ಎಲೆಕ್ಷನ್ ಆಡಿಟ್) ಸರಣಿಯ ಮೂರನೇ ಭಾಗವಾಗಿದೆ.

ನಾವು ಇಲ್ಲಿಯವರೆಗೆ ಕೇವಲ ಒಂದು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ವರದಿಗಳನ್ನು ಮಾತ್ರ ಪರಿಶೀಲಿಸಿದ್ದೇವೆ. ಉಳಿದ ಕ್ಷೇತ್ರಗಳಲ್ಲಿ ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


ಚಿತ್ತೂರಿನಲ್ಲಿ ಸಂಜೆ 6 ಗಂಟೆಯ ನಂತರ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದವರ ಸಂಖ್ಯೆಯ ಬಗ್ಗೆ ಚುನಾವಣಾ ಆಯೋಗದ ಎರಡು ವರದಿಗಳಲ್ಲಿ ಭಾರೀ ವ್ಯತ್ಯಾಸವಿದೆ. Credit: ನಿದಾ ಫಾತಿಮಾ ಮೊಮಿನ್

ಇದೇ ರೀತಿ ಅಂಕಿಅಂಶಗಳು ತಾಳೆಯಾಗದ ಯಾವುದೇ ಕ್ಷೇತ್ರದಲ್ಲಿ ಸಂಜೆ 6 ಗಂಟೆಯ ನಂತರ ನಡೆದ ಮತದಾನದ ವಿಶ್ವಾಸರ್ಹತೆಯನ್ನು ಚುನಾವಣಾ ಆಯೋಗವು ಖಾತರಿಪಡಿಸಲು ಸಾಧ್ಯವಿಲ್ಲ. ಈ ವ್ಯತ್ಯಾಸದ ಬಗ್ಗೆ ವಿವರಣೆ ನೀಡುವಂತೆ ನಾವು ECI ಮತ್ತು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿಯನ್ನು ಕೇಳಿದೆವು. ECI ಇದಕ್ಕೆ ಪ್ರತಿಕ್ರಿಯಿಸಲಿಲ್ಲ, ಆದರೆ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆಯುವಂತೆ CEO ಕಚೇರಿ ನಮಗೆ ಸೂಚಿಸಿತು. ಅದರಂತೆ ನಾವು ಪತ್ರ ಬರೆದಿದ್ದೇವೆ. ಅವರಲ್ಲಿ ಯಾರಾದರೂ ಪ್ರತಿಕ್ರಿಯಿಸಿದರೆ ಈ ವರದಿಯನ್ನು ನವೀಕರಿಸಲಾಗುವುದು.

ಚೀಟಿಗಳ ದಾಖಲೆಯನ್ನು ECI ಹೇಗೆ ನಿರ್ವಹಿಸುತ್ತದೆ? :

ಏಕಕಾಲದಲ್ಲಿ ಚುನಾವಣೆಗಳು ನಡೆದಾಗ, ಚುನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲಿ ಮೂವರು ಮತಗಟ್ಟೆ ಅಧಿಕಾರಿಗಳ ಬದಲಿಗೆ, ಒಬ್ಬ ಪ್ರಿಸೈಡಿಂಗ್ ಆಫೀಸರ್ ಮತ್ತು ಐವರು ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡ ದೊಡ್ಡ ತಂಡವನ್ನು ನಿಯೋಜಿಸುತ್ತದೆ. ಮೊದಲ ಮತಗಟ್ಟೆ ಅಧಿಕಾರಿಯು ಮತದಾರರ ಪಟ್ಟಿಯೊಂದಿಗೆ ಮತದಾರರ ಗುರುತನ್ನು ಪರಿಶೀಲಿಸುತ್ತಾರೆ. ಎರಡನೇ ಮತಗಟ್ಟೆ ಅಧಿಕಾರಿಯು ಮತದಾರರ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಯಿ ಹಚ್ಚಿ, ಮತದಾರರ ನೋಂದಣಿ ಪುಸ್ತಕದಲ್ಲಿ (Register of Voters) ಸಹಿ ಪಡೆಯುತ್ತಾರೆ. ಫಾರ್ಮ್ 17A ಎಂದೂ ಕರೆಯಲ್ಪಡುವ ಈ ಪುಸ್ತಕದಲ್ಲಿ, ಮತ ಚಲಾಯಿಸಲು ಮತಗಟ್ಟೆಗೆ ಬಂದ ಎಲ್ಲಾ ಮತದಾರರ ವಿವರಗಳು ದಾಖಲಾಗುತ್ತವೆ.

ಮೂರನೇ ಮತಗಟ್ಟೆ ಅಧಿಕಾರಿಯು ಒಂದು ಬಿಳಿ ಮತ್ತು ಇನ್ನೊಂದು ಗುಲಾಬಿ ಬಣ್ಣದ ಎರಡು ಒಂದೇ ರೀತಿಯ ಮತದಾರರ ಚೀಟಿಗಳನ್ನು (voter slips) ಸಿದ್ಧಪಡಿಸಿ ಮತದಾರರಿಗೆ ನೀಡುತ್ತಾರೆ. ನಂತರ, ಮತದಾರರು ಲೋಕಸಭಾ ಚುನಾವಣೆಗೆ ಬಳಸುವ ಇವಿಎಂ ಕಂಟ್ರೋಲ್ ಯೂನಿಟ್ ಉಸ್ತುವಾರಿ ವಹಿಸಿರುವ ನಾಲ್ಕನೇ ಮತಗಟ್ಟೆ ಅಧಿಕಾರಿಯ ಬಳಿಗೆ ಹೋಗಿ ಬಿಳಿ ಚೀಟಿಯನ್ನು ನೀಡಿ ತಮ್ಮ ಮತ ಚಲಾಯಿಸುತ್ತಾರೆ.

ಬಳಿಕ, ವಿಧಾನಸಭಾ ಚುನಾವಣೆಗೆ ಬಳಸುವ ಇವಿಎಂ ನಿಯಂತ್ರಣ ಘಟಕದ ಉಸ್ತುವಾರಿ ಹೊಂದಿರುವ ಐದನೇ ಮತಗಟ್ಟೆ ಅಧಿಕಾರಿಯ ಬಳಿಗೆ ತೆರಳಿ ಗುಲಾಬಿ ಬಣ್ಣದ ಚೀಟಿಯನ್ನು ನೀಡುತ್ತಾರೆ. ಆ ನಂತರ ಮತದಾರರಿಗೆ ಎರಡನೇ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ.

ಮೇಲೆ ಹೇಳಿದ ಮತದಾರರ ಚೀಟಿಗಳಿಗಿಂತ ಭಿನ್ನವಾಗಿರುವ, ಮೊದಲೇ ಸಂಖ್ಯೆಗಳನ್ನು ನಮೂದಿಸಿದ ಚೀಟಿಗಳನ್ನು ಮತದಾನ ಮುಕ್ತಾಯಗೊಳ್ಳುವ ಅಧಿಕೃತ ಸಮಯವಾದ ಸಂಜೆ 6 ಗಂಟೆಗೆ ಸರತಿ ಸಾಲಿನಲ್ಲಿ ಕಾಯುತ್ತಿರುವ ಜನರಿಗೆ ಪ್ರಿಸೈಡಿಂಗ್ ಆಫೀಸರ್ ವಿತರಿಸುತ್ತಾರೆ. ಮತದಾನ ಅಧಿಕೃತವಾಗಿ ಮುಕ್ತಾಯಗೊಂಡ ನಂತರ, ಈ ಚೀಟಿಗಳನ್ನು ಹೊಂದಿರುವ ಮತದಾರರು ಮಾತ್ರ ಮತಗಟ್ಟೆ ಪ್ರವೇಶಿಸಿ ಮತ ಚಲಾಯಿಸಬಹುದು. ಸರತಿ ಸಾಲಿನ ಕೊನೆಯಲ್ಲಿ ನಿಂತಿರುವ ವ್ಯಕ್ತಿಗೆ ಸ್ಲಿಪ್ ಸಂಖ್ಯೆ 1ನ್ನು ನೀಡಲಾಗುತ್ತದೆ ಮತ್ತು ಅಲ್ಲಿಂದ ಸಾಲಿನ ಮುಂಭಾಗಕ್ಕೆ ಸಂಖ್ಯೆಗಳು ಮುಂದುವರಿಯುತ್ತವೆ. ತಾವು ವಿತರಿಸಿದ ಒಟ್ಟು ಚೀಟಿಗಳ ಸಂಖ್ಯೆಯನ್ನು ಪ್ರಿಸೈಡಿಂಗ್ ಆಫೀಸರ್ ತಮ್ಮ ಡೈರಿಯಲ್ಲಿ ದಾಖಲಿಸುತ್ತಾರೆ.


ಗ್ರಾಫಿಕ್: ನಿದಾ ಫಾತಿಮಾ ಮೊಮಿನ್

ಮತದಾನ ಮುಕ್ತಾಯಗೊಂಡ ನಂತರ, ಪ್ರಿಸೈಡಿಂಗ್ ಆಫೀಸರ್ ತಮ್ಮ ಡೈರಿ ಮತ್ತು ಮತದಾರರ ನೋಂದಣಿ ಪುಸ್ತಕವನ್ನು ರಿಟರ್ನಿಂಗ್ ಆಫೀಸರ್ ಗೆ ಸಲ್ಲಿಸುತ್ತಾರೆ. ಅವರು ಮರುದಿನ ಅವುಗಳನ್ನು ಪರಿಶೀಲಿಸುತ್ತಾರೆ. ಚುನಾವಣಾಧಿಕಾರಿಗೆ ಏನಾದರೂ ಅನುಮಾನಾಸ್ಪದ ಅಂಶ ಕಂಡುಬಂದರೆ, ಆ ಮತಗಟ್ಟೆಯಲ್ಲಿ ಮರುಮತದಾನ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡುತ್ತಾರೆ. ಒಂದೇ ಮತಗಟ್ಟೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆಗಳು ನಡೆದಿದ್ದು, ಸಂಜೆ 6 ಗಂಟೆಗೆ ಒಂದೇ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಅದೇ ಪ್ರಿಸೈಡಿಂಗ್ ಆಫೀಸರ್ ಚೀಟಿಗಳನ್ನು ವಿತರಿಸಿದ್ದರೆ, ಎರಡು ವಿಭಿನ್ನ ಸಂಖ್ಯೆಗಳು ಹೇಗೆ ಬರಲು ಸಾಧ್ಯ?

ಈ ವರದಿಯನ್ನು ʼವಾರ್ತಾಭಾರತಿʼಗಾಗಿ ರಶ್ಮಿ ಕಾಸರಗೋಡು ಅನುವಾದಿಸಿದ್ದಾರೆ.

ಇಂತಹ ತನಿಖಾ ವರದಿಗಳ ಮೂಲಕ ಎಲ್ಲರೂ ತಿಳಿದಿರಬೇಕಾದ ಮಹತ್ವದ ಮಾಹಿತಿಗಳನ್ನು ಬಯಲು ಮಾಡುತ್ತಿರುವ The Reporters' Collective ಗೆ ಆರ್ಥಿಕ ನೆರವು ನೀಡಿ ಬೆಂಬಲಿಸಿ. ಈ ಲಿಂಕ್ ಕ್ಲಿಕ್ ಮಾಡಿ.

https://www.reporters-collective.in/support-us

Tags

Election CommissionVotingN.Chandrababu Naiduelection
share
ಸುಮೇಧಾ ಮಿತ್ತಲ್
ಸುಮೇಧಾ ಮಿತ್ತಲ್
ವೆಂಕಟೇಶ್ ನಾಯಕ್
ವೆಂಕಟೇಶ್ ನಾಯಕ್
Next Story
X