ಕಾವ್ಯ ಸಂಗಮ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಇವರ ಊರು. ಪಶುವೈದ್ಯಾಧಿಕಾರಿಯಾಗಿ 6 ವರ್ಷ ಹಳ್ಳಿಯಲ್ಲಿ ಸೇವೆ ಮಾಡಿದವರು. 2011ರಿಂದ ಕೆ ಎ ಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರಸಕ್ತ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ನಿರ್ವಹಿಸುತ್ತಿದ್ದಾರೆ.
ಮಲದ ಗುಂಡಿ
ಅವಳು ಪುಟ್ಟ ಬಾಲಕಿ
ಮಲ ಹೊರುತ್ತಿದ್ದಳು
ವಂಶಪಾರಂಪರ್ಯ ಕಸುಬು
ಇವಳು ಮಾಡುತ್ತಿದ್ದಳು
ಪುಟ್ಟ ಕೈ
ಬೊಗಸೆಯೊಳು ಆಗಸದ ಹಂಬಲ
ಬಾಚಿದ್ದು ವಿಸರ್ಜನೆಯ ಮಲ
ಸಾಮೂಹಿಕ ವಿಸರ್ಜನಾ ಗುಂಡಿಲಿ
ಈಗ ಬಂದಿದೆ ಹೊಸ ಕಾನೂನು
ಅನಿಷ್ಟ ಪದ್ಧತಿಯು ಬುಡ ಮೇಲು ಇನ್ನು
ಆದರೆ ವಾಸ್ತವನೇ ಬೇರೆ
ಅದೇ ಪದ್ಧತಿ ಮಜುಲು ಬೇರೆ, ಹೆಸರು ಬೇರೆ.
ಇವಳೂ ನೋಡುವಳು ಬೇರೆ ಮಕ್ಕಳಂತೆ
ಪಾಯಿಕಾನೆಯ ಗುಂಡಿಯ ಒಳಗಿಳಿದ ಅವರಪ್ಪನನು
ಇಳಿದೊನು ಹೊರಬಾರಲೇಯಿಲ್ಲ
ಶಾಲೆ ಬಿಟ್ಟು ಇವಳು ಕ್ಲೀನ್ ಮಾಡೋಕೆ ಇಳಿದಳಲ್ಲ
ಇವಳೇ ಮುಂದೊಂದು ದಿನ ತಾಯಿಯಾಗಬಹುದು
ತನ್ನ ಮಗುವ ಹೇಸಿಗೆ ಎಂದು ಭಾವಿಸಿ
ಈಗ ಶುಚಿ ಮಾಡುತ್ತಿರಬಹುದು
ಹೊತ್ತ ಮಲ ಸೋರಿ ಹಣೆಗೆ ಹಟ್ಟೆಯಾದಂತೆ
ಕಂದಾಚಾರಕೆ ಭಾವನೆಗಳೇ ಮರುಗಟ್ಟಿರಬಹುದು.
ಪ್ರತಿಯೊಂದು ರಸ್ತೆಗಳು ಮಾತಾಡುತ್ತಿವೆ
ರಸ್ತೆ ಗಳೂ... ಆತ್ಮಗಳೂ... ಮಾತಾಡಿವೆ.
ಪ್ರತಿಯೊಂದು ರಸ್ತೆಗಳು ಮಾತಾಡುತ್ತಿವೆ
ಜ್ವಲಂತ ಸಾಕ್ಷಿಯಾಗಿ, ಕುರುಹನ್ನು ಕೈಯಲ್ಲಿಡಿದು...
ಛೇ....ಇದೊಂದು ತಪ್ಪಿಸಬಹುದಿತ್ತು ಎಂದು
ಮರುಗಿ ರಸ್ತೆಗಳು ಹೆಪ್ಪುಗಟ್ಟಿ ಮಲಗಿವೆ.....
ಅಮ್ಮ ಹೆಲ್ಮಟ್ ಕೊಟ್ಟರೂ ಬೇಡ ಎಂದ ಹುಡುಗಿ
ರಸ್ತೆಗೆ ತಲೆ ಕೊಟ್ಟಾಗ ಅತ್ತಿವೆ.....
ಅಪ್ಪ ನೀ ಇನ್ನೂ ಸಣ್ಣವ ಬೇಡ ನಿನಗೆ ಗಾಡಿ
ಎಂದರೂ ಕೇಳದ ಹುಡುಗನಿಗಾಗಿ ರಸ್ತೆಗಳು ಚಿಂತಿಸಿವೆ.
ಮೊನ್ನೆ ನಾಲ್ಕು ರಸ್ತೆಗಳು, ಸಂಧಿಸುವ ಬಿಂದುವಲ್ಲಿ ಸೇರಿ
ಇಲ್ಲಿ ನೋಡು ಹಂಪ್ಸ್ ಇಲ್ಲ...ಮತ್ತಿಲ್ಲಿ ಮಿರರ್....
ಸೂಚನಾ ಫಲಕದ ವಿಳಾಸ ಹುಡುಕಬೇಕಿದೆ...!!!
ರಸ್ತೆಯ ಮೇಲೇ ಎಲ್ಲ ವ್ಯವಹಾರ, ...
ಪುಟ್ ಪಾತ್ ಅನ್ನು ದೇವರೇ ಹುಡುಕಬೇಕು ರಸ್ತೆಗಿಲ್ಲಿ....
ಮಿರಿಮಿರಿ ಬೆಳಕಿನ ಡಾಬ, ಸುರಪಾನ ಪೋಶಿಸಿದರೆ
ಇತ್ತ ಕುಡಿದು ರಸ್ತೆಗೂ ತಲೆ ತಿರುಗಿಸಿ...
ಮಂಪರಿನಲ್ಲಿ ಬಿದ್ದ ಸವಾರ ಆಸ್ಪತ್ರೆ ಸೇರದೇ....
ಯಾರದ್ದೋ ಮೊಬೈಲ್‌ನಲ್ಲಿ ಸೆರೆ ಆಗಿದ್ದಕ್ಕೆ ವ್ಯಾಕುಲಗೊಂಡಿವೆ
ಇನ್ನು ಏನೇನು ?? ನೊಡಬೇಕು ಈ ಕಣ್ಣಲಿ !!!
ಎಂದು ರಸ್ತೆಗಳು ಅಳುತ್ತಿವೆ...
ತನ್ನ ಹೃದಯದಲ್ಲಿ ಉಂಟಾದ ತಗ್ಗುಗಳಿಗೆ, ಕಳಪೆ ಕಾಮಗಾರಿಗೆ,
ಕಂಟ್ರಾಕ್ಟರನ್ನು ಕಟಕಟೆಗೆ ನಿಲ್ಲಿಸಲು ಅಣಿಯಾಗಿವೆ.
ಒಂದೊಂದು ರಸ್ತೆ ಒಂದೊಂದು ಕತೆ ಹೇಳುತ್ತಿವೆ
ರಸ್ತೆಯಲ್ಲಿ ಸತ್ತ ಆತ್ಮಗಳು... ರಸ್ತೆಗಳು... ಸೇರಿ
ದನಿಯಿಲ್ಲದ ಮಾತಿನಲಿ ಕೂಗಿಹೇಳುತ್ತಿವೆ
ನಾಳೆ ನೀವು ಇಲ್ಲಿ ಕತೆ ಆಗಬೇಡಿರೆಂದು......
ನೀನು ನನ್ನನು ಬಿಟ್ಟುಹೋಗಿ ಬಹಳ ದಿನಗಳಾಗಿವೆ
ಜೊತೆಯಲ್ಲಿದ್ದ ನಿನ್ನಯ ನೆನಪುಗಳು ಕೊಂಡಿಕಳಚಿ
ಒಂದೊಂದಾಗಿ ದೂರ ಹೋಗುತ್ತಿವೆ
ದಿನವೂ ನೂರಾರು ಮುಖಗಳು ಎದಿರಾಗುತ್ತವೆ ನಿನಗೆ-ನನಗೆ
ಸ್ವಲ್ಪ ನಗು ಮಾತು ಕಥೆ.....
ಅದರ ಮಧ್ಯೆ ನಿನ್ನ ನೆನಪು ನನ್ನಯ ಮಾತೇ ನಿಲ್ಲಿಸಿ ಬಿಡುತ್ತಿದೆ.....
ಅವಳೊಂದಿಗೆ ಏನು ಮಾತು ಎಂದು
ಹೋಗಲಿ ನೆನಪಿಗೆ ಬೆಲೆ ಕೊಟ್ಟು ಬಂದರೆ
ನಿನ್ನ ನೆನಪಿಗೆ ಕೊಬ್ಬು ಹೆಚ್ಚಾಗಿ ತಿರುಗಿ ನೊಡದೇ ದೂರ ಸರಿಯುತ್ತೆ.....
ಹೋಗಲಿ ಬಿಡು ಎಂದು ಸುಮ್ಮನಾಗಿದ್ದ ನನಗೆ
ನನ್ನ ಉಸಿರೂ, ಆತ್ಮಸಾಕ್ಷಿ ಕೇಳುತ್ತದೆ
ನನ್ನ ನೆನಪು ಮಾತನಾಡಿಸುತ್ತಿಲ್ಲವೆ ಅವಳಿಗೆ ????
ನನ್ನೆದೆಯೊಳು ತಲೆ ಬಚ್ಚಿಟ್ಟಾಗ ತಾಗಿದ ಬಿಸಿ
ಜ್ವರ ತರಿಸುತ್ತಿಲ್ಲವೆ ಅವಳಿಗೆ....????