2024ನೇ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟ ; ಕಾಸರಗೋಡಿನ ಸತ್ಯನಾರಾಯಣ ಬೇಲೇರಿ, ಮೈಸೂರಿನ ಸೋಮಣ್ಣಗೆ ಪದ್ಮಶ್ರೀ ಮುಕುಟ
Update: 2024-01-25 22:18 IST
Photo : awards.gov.in
ಹೊಸದಿಲ್ಲಿ : ಪ್ರತೀ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಕಾಸರಗೋಡಿನ ಸತ್ಯನಾರಾಯಣ ಬೇಲೇರಿ, ಮೈಸೂರಿನ ಸೋಮಣ್ಣಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಸತ್ಯನಾರಾಯಣ ಬೇಲೇರಿ ಕಾಸರಗೋಡಿನ ಭತ್ತ ಬೆಳೆಯುವ ರೈತರಾಗಿದ್ದು 650 ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ಬೆಳೆಗಳ ಕಾವಲುಗಾರನಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮೈಸೂರಿನ ಬುಡಕಟ್ಟು ಕಾರ್ಯಕರ್ತ ಸೋಮಣ್ಣ 4 ದಶಕಗಳಿಂದ ಜೇನು ಕುರುಬ ಬುಡಕಟ್ಟು ಜನಾಂಗದ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಉಳಿದ ಪುರಸ್ಕ್ರತರ ವಿವರಗಳು ಬರಲಿದೆ.