ಗುಜರಾತ್ | ಐತಿಹಾಸಿಕ ಮಂಚ ಮಸೀದಿಯ ಮುಖ್ಯ ಭಾಗ ಕೆಡವದಂತೆ ತಡೆ ನೀಡಿದ ಸುಪ್ರೀಂ ಕೋರ್ಟ್
ಪ್ರಕರಣದಲ್ಲಿ ಕಾನೂನು ಹೋರಟ ನಡೆಸಿದ್ದ ಎಪಿಸಿಆರ್
Photo credit: PTI
ಹೊಸದಿಲ್ಲಿ: ಅಹ್ಮದಾಬಾದ್‌ನಲ್ಲಿರುವ 400 ವರ್ಷ ಹಳೆಯ ಐತಿಹಾಸಿಕ ಮಂಚ ಮಸೀದಿಯ ಭಾಗಶಃ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ರಸ್ತೆ ಅಗಲೀಕರಣ ಯೋಜನೆಗಾಗಿ ಮಸೀದಿಯ ಮುಖ್ಯ ರಚನೆ ಕಡವುದರ ವಿರುದ್ಧ ಸಲ್ಲಿಸಿದ ವಿಶೇಷ ರಜೆ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿ ಮಾಡಿದೆ. ಈ ಪ್ರಕರಣದಲ್ಲಿ ಕಾನೂನು ಹೋರಾಟಗಳ ಮೂಲಕ ಎಪಿಸಿಆರ್ ಕಾನೂನು ತಂಡವು ನಿರ್ಣಾಯಕ ಪರಿಹಾರವನ್ನು ಕಂಡುಕೊಂಡಿದೆ.
ಸುಮಾರು 15 ಚದರ ಮೀಟರ್ ವಿಸ್ತೀರ್ಣದ ಮಸೀದಿಯ ಮುಖ್ಯ ಭಾಗವನ್ನು ಕೆಡವುದಿಲ್ಲ. ಆದರೆ, ಸುಮಾರು 80 ಚದರ ಮೀಟರ್ ಪ್ರದೇಶದ ತೆರೆದ ವೇದಿಕೆ, ಮೆಟ್ಟಿಲುಗಳು ಮತ್ತು ಹೊರಗೋಡೆಯ ಭಾಗವನ್ನು ಮಾತ್ರ ರಸ್ತೆ ಅಗಲೀಕರಣ ಯೋಜನೆಗಾಗಿ ಪಡೆದುಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ
ಈ ಯೋಜನೆಯ ಭಾಗವಾಗಿ ಒಂದು ದೇವಾಲಯ, ಕೆಲವು ವ್ಯಾಣಿಜ್ಯ ಮತ್ತು ವಸತಿ ಕಟ್ಟಡಗಳನ್ನೂ ತೆರವುಗೊಳಿಸಲಾಗುತ್ತದೆ. ಈ ಯೋಜನೆಯು ಯಾವುದೇ ಒಂದು ಧಾರ್ಮಿಕ ಸ್ಥಳವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ತಿಳಿಸಿದೆ. ಮಸೀದಿ ನೋಂದಾಯಿತ ವಕ್ಫ್ ಆಸ್ತಿಯಾಗಿರುವುದರಿಂದ, ಗುಜರಾತ್ ರಾಜ್ಯ ವಕ್ಫ್ ಮಂಡಳಿಯು ಕಾನೂನಿನ ಪ್ರಕಾರ ಸ್ವಾಧೀನಪಡಿಸಿಕೊಂಡ ಭೂಮಿಯ ಭಾಗಕ್ಕೆ ಪರಿಹಾರವನ್ನು ಪಡೆಯಲು ಅರ್ಹವಾಗಿರುತ್ತದೆ.
ಈ ತೀರ್ಪು ಅಹಮದಾಬಾದ್‌ನ ಐತಿಹಾಸಿಕ ಮಸೀದಿಯ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಉಳಿಸಿ, ನಗರ ಅಭಿವೃದ್ಧಿಯ ಅಗತ್ಯಗಳಿಗೂ ಸಮತೋಲನ ತರುತ್ತದೆ.
ಮಂಚ ಮಸೀದಿ vs ಗುಜರಾತ್ ರಾಜ್ಯಗಳ ನಡುವಿನ ಈ ಪ್ರಕರಣವನ್ನು APCR ಕಾನೂನು ತಂಡವು ನಿರ್ವಹಿಸಿತ್ತು. ವಕೀಲರಾದ ವಾರಿಶಾ ಫರಾಸತ್, ಕೌಸ್ತುಭ್ ಚತುರ್ವೇದಿ, ಎಂ. ಹುಝೈಫಾ, ಝೆಬಾ ಆಫ್ರಿನ್ ಮತ್ತು AOR ಯಶವಂತ್ ಸಿಂಗ್ ತಂಡದಲ್ಲಿದ್ದರು.