×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ ಹಲವು ನಗರಗಳಲ್ಲಿ ಈ.ಡಿ. ದಾಳಿ

Update: 2025-05-21 21:42 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ಹಣ ಅಕ್ರಮ ವರ್ಗಾವಣೆ ಆರೋಪದ ಕುರಿತ ತನ್ನ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ.) ಮುಂಬೈ, ಬೆಂಗಳೂರು, ಜಲಾಂಧರ್, ಇಂದೋರ್ ಹಾಗೂ ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಶೋಧ ಕಾರ್ಯಾಚರಣೆ ನಡೆಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), 2002ರ ನಿಯಮಗಳ ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ತಿಳಿಸಿದೆ.

ಶೋಧ ಕಾರ್ಯಾಚರಣೆ ಸಂದರ್ಭ ಜಾರಿ ನಿರ್ದೇಶನಾಲಯ ಸುಮಾರು 6.43 ಲಕ್ಷ ರೂ. ಮೊತ್ತದ ಅಮೆರಿಕ ಡಾಲರ್, ಸಿಂಗಪುರ ಡಾಲರ್, ದಿರ್ಹಮ್ಸ್ ಸೇರಿದಂತೆ ವಿದೇಶಿ ಕರೆನ್ಸಿ; 55.74 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಸುಮಾರು 94 ಲಕ್ಷ ರೂ. ಬಾಕಿ ಇರುವ ಬ್ಯಾಂಕ್ ಖಾತೆಯನ್ನು ಸ್ಥಂಭನಗೊಳಿಸಿದೆ.

ಸೊತ್ತಿನ ದಾಖಲೆಗಳು, ಹಲವು ಡಿಜಿಟಲ್ ಸಾಧನಗಳು ಹಾಗೂ ಅಪರಾಧವನ್ನು ಸಾಬೀತುಪಡಿಸುವ ದಾಖಲೆಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News