×
Ad

ಕೇರಳದಲ್ಲಿ ನಿಂತಿರುವ ಎಫ್-35ಬಿ ಯುದ್ಧ ವಿಮಾನದ ತಪಾಸಣೆಗೆ ಶೀಘ್ರದಲ್ಲೇ ಬ್ರಿಟನ್ ಸಿಬ್ಬಂದಿಗಳ ಆಗಮನ: ವರದಿ

Update: 2025-06-21 21:33 IST

PC : NDTV

ತಿರುವನಂತಪುರಂ: ಕಳೆದ ವಾರ ತಿರುವನಂತಪುರಂನಲ್ಲಿ ಬಂದಿಳಿದಿರುವ ಎಫ್-35ಬಿ ಲೈಟನಿಂಗ್ 2 ಸ್ಟೀಲ್ತ್ ಫೈಟರ್ ಜೆಟ್ ವಿಮಾನದ ತಪಾಸಣೆ ನಡೆಸಲು ಬಿಡಿ ಭಾಗಗಳನ್ನು ಹೊತ್ತೊಯ್ಯುತ್ತಿರುವ ಬ್ರಿಟನ್ ನೌಕಾಪಡೆಯ ತಂಡವೊಂದು ಶೀಘ್ರವೇ ಕೇರಳ ತಲುಪಲಿದೆ ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ಸದ್ಯ ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿರುವ ಬ್ರಿಟನ್ ನ ಎಚ್ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ನ ಈ ಸುಧಾರಿತ ಐದನೆ ತಲೆಮಾರಿನ ಯುದ್ಧ ವಿಮಾನವು ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮರಾಭ್ಯಾಸ ಮುಕ್ತಾಯಗೊಳಿಸಿ ಮರಳುವಾಗ, ಇಂಧನ ಕೊರತೆಗೆ ಸಿಲುಕಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ವಿಮಾನವು ತೀವ್ರ ಇಂಧನದ ಕೊರತೆಯನ್ನು ವರದಿ ಮಾಡಿದ್ದರಿಂದ, ಜೂನ್ 14ರಂದು ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲು ತುರ್ತು ಅನುಮತಿಯನ್ನು ನೀಡಲಾಗಿತ್ತು.

ಇಂಧನ ಮರು ಭರ್ತಿಯ ನಂತರ, ಈ ವಿಮಾನ ಶೀಘ್ರವಾಗಿ ಟೇಕಾಫ್ ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ, ಈ ವಿಮಾನದಲ್ಲಿ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾಗಿತ್ತು. ಹೀಗಾಗಿ ಈ ವಿಮಾನದ ನಿರ್ಗಮನ ವಿಳಂಬವಾಗಿತ್ತು.

ನಂತರ ರಾಯಲ್ ನೇವಿ ಹೆಲಿಕಾಪ್ಟರ್ ಬ್ರಿಟಿಷ್ ಎಂಜಿನಿಯರ್‌ಗಳ ತಂಡವನ್ನು ಮತ್ತು ಬದಲಿ ಪೈಲಟ್ ಅನ್ನು ಸ್ಥಳಕ್ಕೆ ಸಾಗಿಸಿತು. ಮುಂದಿನ ಕೆಲವು ದಿನಗಳಲ್ಲಿ ಹಲವಾರು ಪ್ರಯತ್ನಗಳ ಹೊರತಾಗಿಯೂ, ವಿಮಾನವು ಟೇಕ್-ಆಫ್ ಆಜ್ಞೆಗಳಿಗೆ ಪ್ರತಿಕ್ರಿಯಿಸಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News