×
Ad

ವಿಮಾನ ದುರಂತ | ಕನಸು ಈಡೇರುವ ಮುನ್ನವೇ ಸಾವನ್ನಪ್ಪಿದ ಕೇರಳದ ನರ್ಸ್

Update: 2025-06-13 21:42 IST

ರಂಜಿತಾ ಗೋಪಕುಮಾರನ್ ನಾಯರ್ | Credit: X/@LakshmiIndiaInc

ಪತ್ತನಂತಿಟ್ಟ : ಅಹ್ಮದಾಬಾದ್‌ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಲ್ಲಿ ರಂಜಿತಾ ಗೋಪಕುಮಾರನ್ ನಾಯರ್ ಕೂಡ ಸೇರಿದ್ದಾರೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪತ್ತನಂತಿಟ್ಟದ ಪುಲ್ಲಾಡ್‌ ನಲ್ಲಿ ದುಃಖ ಮಡುಗಟ್ಟಿತು.

39 ವರ್ಷದ ರಂಜಿತಾ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ದಿನಗಳ ಹಿಂದೆ ಮನೆಗೆ ಬಂದಿದ್ದರು. ಅನಂತರ ಈ ಏರ್ ಇಂಡಿಯಾದಲ್ಲಿ ಹಿಂದಿರುಗುತ್ತಿದ್ದಾಗ ದುರಂತ ಸಂಭವಿಸಿದೆ.

ಒಮಾನ್ ಸಲಾಲಾದಲ್ಲಿ, ಅನಂತರ ಬ್ರಿಟನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ರಂಜಿತಾ ತನ್ನ ಜೀವನದ ಆಕಾಂಕ್ಷೆಯನ್ನು ಈಡೇರಿಸುವ ಹಂತದಲ್ಲಿದ್ದರು.

ಅವರು ಕಳೆದ 8 ತಿಂಗಳಿಂದ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೇರಳದಲ್ಲಿ ತನ್ನ ಸರಕಾರಿ ಉದ್ಯೋಗದ ನವೀಕರಣದ ಔಪಚಾರಿಕತೆಯನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಅವರು ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದರು.

ರಂಜಿತಾ ಅವರಿಗೆ 5 ವರ್ಷಗಳ ಹಿಂದೆ ಪತ್ತನಂತಿಟ್ಟದ ಜನರಲ್ ಆಸ್ಪತೆಯಲ್ಲಿ ಉದ್ಯೋಗಿ ಸಿಕ್ಕಿತ್ತು. ಅವರು ದೀರ್ಘ ರಜೆಯಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಪುಲ್ಲಡ್‌ ನಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದರು. ಶೀಘ್ರದಲ್ಲಿ ಆ ಮನೆಗೆ ಸ್ಥಳಾಂತರಗೊಳ್ಳಲು ಯೋಜಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News