×
Ad

ಉತ್ತರ ಪ್ರದೇಶ | ದೇವಾಲಯದ ದೇಣಿಗೆ ಪೆಟ್ಟಿಗೆಗಾಗಿ ಕಿತ್ತಾಟ : ಓರ್ವನ ಹತ್ಯೆ

Update: 2024-10-01 21:50 IST

ಸಾಂದರ್ಭಿಕ ಚಿತ್ರ

ಮಿರ್ಝಾಪುರ್: ದೇವಾಲಯದ ದೇಣಿಗೆ ಪೆಟ್ಟಿಗೆಯನ್ನು ಒಡೆಯುವ ಕುರಿತು ಎರಡು ಗುಂಪುಗಳ ನಡುವೆ ನಡೆದ ಕಿತ್ತಾಟದಲ್ಲಿ ಓರ್ವ ಗುಂಡೇಟಿಗೆ ಬಲಿಯಾಗಿರುವ ಘಟನೆ ಮಂಗಳವಾರ ದೇಹತ್ ಪ್ರದೇಶದ ಗುರ್ಸಂದಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಾರಾಯಣ್ ದುಬೆ ಅಲಿಯಾಸ್ ಗಬ್ಬರ್ ಎಂಬ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಲ್ಲಿ ಶ್ರವಣ್ ಪಾಂಡೆ ಎಂಬುವವರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಹನುಮಾನ್ ದೇವಾಲಯದ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಕಿತ್ತಾಟದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಸಂಬಂಧ ಒಂಬತ್ತು ಮಂದಿ ಪೊಲೀಸರನ್ನು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ದೇವಾಲಯದ ದೇಣಿಗೆ ಪೆಟ್ಟಿಗೆ ಕುರಿತು ಶ್ರೆವಣ್ ತಂದೆ ಕೃಪಾ ಶಂಕರ್ ಪಾಂಡೆ ಪೊಲೀಸರಿಗೆ ದೂರು ನೀಡಿದ್ದರು. ಅವರು ಪೊಲೀಸ್ ಠಾಣೆಯಿಂದ ಮರಳಿದ ನಂತರ, ಎರಡು ಗುಂಪುಗಳ ನಡುವೆ ಘರ್ಷಣೆ ಪ್ರಾರಂಭವಾಗಿ, ಕೃಪಾ ಶಂಕರ್ ಪಾಂಡೆ ಅವರ ಪುತ್ರ ಶ್ರಯವಣ್ ಗೆ ಗಬ್ಬರ್ ಗುಂಡಿಟ್ಟು ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News