ಬಾಫ್ಟಾ 2016ಕ್ಕೆ ಮಲಾಲಾ ಸಾಕ್ಷಚಿತ್ರ ನಾಮನಿರ್ದೇಶನ
ಲಂಡನ್, ಜ.9: ಸತ್ಯ ಘಟನೆಯನ್ನಾಧರಿಸಿದ ಪಾಕ್ ಬಾಲಕಿ ಮಲಾಲಾ ಯೂಸುಫ್‌ಝಾಯಿ ಕುರಿತ ಸಾಕ್ಷಚಿತ್ರವು 2016ನೆ ಸಾಲಿನ ಬಾಫ್ಟಾ (ಬ್ರಿಟಿಷ್ ಅಕಾಡಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಶನ್ ಆರ್ಟ್ಸ್) ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ. ಹೆಣ್ಣುಮಕ್ಕಳ ಶಿಕ್ಷಣ ಪರ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝಾಯಿ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರರ ದಾಳಿಗೆ ಒಳಗಾದ ಸತ್ಯಘಟನೆಯನ್ನು ಆಧರಿಸಿ ಈ ಸಾಕ್ಷಚಿತ್ರವನ್ನು ನಿರ್ಮಿಸಲಾಗಿದೆ.
ಹೆಣ್ಣು ಮಕ್ಕಳ ಪರ ಹೋರಾಟಗಾರ್ತಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಜೀವನ ವೃತ್ತಾಂತವನ್ನು ಅಧರಿಸಿದ ‘ಹಿ ನೇಮ್ಡ್ ಮಿ ಮಲಾಲಾ’ ಅಮೆರಿಕನ್ ಚಿತ್ರವು 68ನೆ ಬಾಫ್ಟಾ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗೊಂಡಿದೆ.
2012ರ ಅಕ್ಟೋಬರ್ 9ರಂದು ಪಾಕ್‌ನ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಮಲಾಲಾರ ಜೀವನದ ಘಟನೆಗಳ ನೈಜ ಚಿತ್ರಣ ಹಾಗೂ ಸಂದರ್ಶನಗಳಿಂದ ಹೆಣೆಯಲಾದ ‘ಹಿ ನೇಮ್ಡ್ ಮಿ ಮಲಾಲಾ’ ಚಿತ್ರಕ್ಕೆ ಡೇವಿಸ್ ಗುಗೆನ್‌ಹಿನ್ ನಿರ್ದೇಶನವಿದೆ.