ದುಬೈ ವಿಮಾನ ದುರಂತದಲ್ಲಿ ಮಡಿದ ಅಗ್ನಿ ಶಾಮಕ ಸಿಬ್ಬಂದಿಗೆ ಭಾರತದ ಗೌರವ

Update: 2016-08-06 04:06 GMT

ದುಬೈ, ಆ.6: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ಎಮಿರೇಟ್ಸ್ ವಿಮಾನ ಬೆಂಕಿ ಆಕಸ್ಮಿಕದಲ್ಲಿ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಬೆಂಕಿಯೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಎಮಿರೇಟ್ ಅಗ್ನಿಶಾಮಕ ದಳ ಸಿಬ್ಬಂದಿಗೆ ಕೇರಳದ ಸಿವಿಲ್ ಡಿಫೆನ್ಸ್ ಸೆಂಟರ್ ಗೌರವ ಸಲ್ಲಿಸಿದೆ.

ದೇಶದ ಹುತಾತ್ಮ ಜೆನ್ನಿಮ್ ಇಸಾ ಅಲ್ ಬಲೂಶಿ ತಮ್ಮ ಕೆಚ್ಚೆದೆಯ ಸಾಹಸದಿಂದಾಗಿ ಭಾರತದಲ್ಲಿ ಹೀರೊ ಎನಿಸಿದ್ದಾರೆ, ಪ್ರಯಾಣಿಕರ ಜೀವರಕ್ಷಣೆಗಾಗಿ ತಮ್ಮ ಜೀವ ಬಲಿದಾನ ಮಾಡಿದ ಇವರ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಭಾರತದಿಂದ ಆಗಮಿಸಿದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್‌ನಲ್ಲಿ ಅಲ್ ಬಲೂಶಿಯವರ ದೊಡ್ಡ ಭಾವಚಿತ್ರವನ್ನು ಸಿವಿಲ್ ಡಿಫೆನ್ಸ್ ಕೇಂದ್ರದ ಮುಂಭಾಗದಲ್ಲಿ ಪ್ರದರ್ಶಿಸಲಾಗಿದೆ. ಇವರನ್ನು ಇಡೀ ವಿಶ್ವದಲ್ಲೇ ಅಗ್ನಿಶಾಮಕ ದಳಕ್ಕೆ ಮಾದರಿ ಎಂದು ಬಣ್ಣಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಇವರ ಸಾಹಸಗಾಥೆ ಹರಿದಾಡುತ್ತಿದ್ದು, ಭಾರತದ ಹಲವು ನಗರಗಳಲ್ಲಿ ಇವರ ಸಾಹಸದ ಬಗ್ಗೆ ಸರ್ವತ್ರ ಮೆಚ್ಚುಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News