×
Ad

ಹಿಲರಿಗೆ 70 ನೊಬೆಲ್ ವಿಜೇತರ ಬೆಂಬಲ

Update: 2016-10-19 23:58 IST

ವಾಶಿಂಗ್ಟನ್, ಅ. 19: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಯಾಗಿರುವ ಹಿಲರಿ ಕ್ಲಿಂಟನ್‌ಗೆ ಕನಿಷ್ಠ 70 ಮಂದಿ ನೊಬೆಲ್ ಪ್ರಶಸ್ತಿ ವಿಜೇತರು ಬೆಂಬಲ ಸೂಚಿಸಿದ್ದಾರೆ.
 ಸ್ವಾತಂತ್ರ ಹಾಗೂ ಸಾಂವಿಧಾನಿಕ ಸರಕಾರವನ್ನು ಸಂರಕ್ಷಿಸಲು ಹಿಲರಿ ಕ್ಲಿಂಟನ್ ಆಯ್ಕೆ ಅಗತ್ಯವಾಗಿದೆ ಎಂದು ಅವರು ಹೇಳಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ವಿಜ್ಞಾನ, ವೈದ್ಯಕೀಯ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ನೊಬೆಲ್ ಪಡೆದ ವ್ಯಕ್ತಿಗಳು ಹೇಳಿಕೆಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News