ಟ್ರಂಪ್‌ಗೆ ಸಹಾಯ ಮಾಡುವುದಿಲ್ಲ : ತಂತ್ರಜ್ಞಾನ ಉದ್ಯೋಗಿಗಳ ಪ್ರತಿಜ್ಞೆ

Update: 2016-12-14 15:36 GMT

ವಾಶಿಂಗ್ಟನ್, ಡಿ. 14: ಧರ್ಮದ ಆಧಾರದಲ್ಲಿ ಜನರನ್ನು ಗುರುತಿಸುವ ಅಥವಾ ಸಾಮೂಹಿಕ ಗಡಿಪಾರಿಗೆ ಸಹಾಯ ಮಾಡುವ ಮಾಹಿತಿ ಕೋಶವನ್ನು ತಯಾರಿಸಲು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಹಾಯ ಮಾಡುವುದಿಲ್ಲ ಎಂದು ಆಲ್ಫಾಬೆಟ್ ಇಂಕ್‌ನ ಗೂಗಲ್, ಟ್ವಿಟರ್ ಇಂಕ್ ಮತ್ತು ಸೇಲ್ಸ್‌ಫೋರ್ಸ್ ಸೇರಿದಂತೆ ತಂತ್ರಜ್ಞಾನ ಕಂಪೆನಿಗಳ 200ಕ್ಕೂ ಹೆಚ್ಚು ಉದ್ಯೋಗಿಗಳು ಮಂಗಳವಾರ ನಿರ್ಧರಿಸಿದ್ದಾರೆ.

ಟ್ರಂಪ್‌ರ ಪ್ರಸ್ತಾಪಿತ ಯೋಜನೆಗಳು ಯಹೂದಿ ಹತ್ಯಾಕಾಂಡ ಮತ್ತು ಎರಡನೆ ಮಹಾಯುದ್ಧದಲ್ಲಿ ಜಪಾನಿ ಅಮೆರಿಕನ್ನರ ನರಮೇಧಕ್ಕೆ ಸಮ ಎಂದು ಅವರು ಹೇಳಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಹುಟ್ಟುಹಾಕಿದ ಕಲ್ಪನೆಗಳನ್ನು ಖಂಡಿಸಿ ‘ನೆವರ್‌ಅಗೇನ್.ಟೆಕ್’ನಲ್ಲಿ ಅವರು ಬಹಿರಂಗ ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News