ಸೌದಿ ಅರೇಬಿಯ: ಹೃದಯಾಘಾತದಿಂದ ಭಾರತೀಯ ವ್ಯಕ್ತಿ ನಿಧನ

Update: 2017-02-26 08:55 GMT

ಜಿದ್ದ,ಫೆ. 26: ಮಲಪ್ಪುರಂ ಅರಿಕ್ಕೋಡ್‌ನ ಝಕೀರ್ ಹುಸೈನ್(44) ಸೌದಿ ಅರೇಬಿಯದ ಜೀಝಾನ್‌ನಲ್ಲಿ ನಿಧನರಾಗಿದ್ದರೆ. ಹೃದಯಾಘಾತದಿಂದ ಜೀಝಾನ್ ಕಿಂಗ್ ಫಹದ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ.

ಕಳೆದ 23ವರ್ಷಗಳಿಂದ ಅವರು ಜಿದ್ದ,ಮಕ್ಕಾಗಳಲ್ಲಿ ಕೆಲಸಮಾಡುತ್ತಿದ್ದರು. ಹೊಸ ಅಂಗಡಿಯೊಂದನ್ನು ಮಾಡುವ ಕೆಲಸದಲ್ಲಿ ಜೀಝಾನ್‌ನಲ್ಲಿ ವ್ಯಸ್ತರಾಗಿದ್ದರು. ಮೃತರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ. ಜೀಝಾನ್‌ನಲ್ಲಿಯೇ ಮೃತದೇಹದ ದಫನ ಕಾರ್ಯ ನಡೆಯಲಿದೆ ಎಂದು ಮೃತರ ಸಹೋದರ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News