3,700 ವರ್ಷ ಹಳೆಯ ಪಿರಮಿಡ್ ಪತ್ತೆ

Update: 2017-04-06 11:12 GMT

ಕೈರೊ,ಎ. 6: ಈಜಿಪ್ಟ್‌ನಲ್ಲಿ 3,700ವರ್ಷ ಹಳೆಯ ಪಿರಮಿಡ್ಡಿನ ಅವಶೇಷಗಳು ಪತ್ತೆಯಾಗಿವೆ ಎಂದು ಪ್ರಾಚ್ಯವಸ್ತು ಅಧಿಕಾರಿಗಳು ತಿಳಿಸಿದ್ದಾರೆ. ಈಜಿಪ್ಟ್‌ನಲ್ಲಿ ನೈಕ್ರೊಪೊಲಿಸ್ನಲ್ಲಿ ಉತ್ಖನನ ನಡೆಸಿದ ತಂಡ ಇದನ್ನು ಪತ್ತೆಹಚ್ಚಿದೆ. ಈಜಿಪ್ಟ್‌ನ 13ನೆ ರಾಜವಂಶಕ್ಕೆ ಸಂಬಂಧಿಸಿದ ಪಿರಮಿಡ್ ಇದು ಎಂದು ಅಂದಾಜಿಸಲಾಗಿದೆ. ನೈಕ್ರೊಪೊಲಿಸ್‌ನಲ್ಲಿರುವ ಸ್ನೈಫರ್ ದೊರೆಯ ಪಿರಮಿಡ್‌ನ ಬಳಿ ಪಿರಮಿಡೊಂದರ ಅವಶೇಷಗಳು ಪತ್ತೆಯಾಗಿವೆ ಎಂದು ಈಜಿಪ್ಟ್‌ನ ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಮಹ್ಮೂದ್ ಅಫಿಫಿ ಹೇಳಿದ್ದಾರೆ.

ಪಿರಮಿಡ್ ಒಳಭಾಗದ ಅವಶೇಷಗಳು ಈಗ ಪತ್ತೆಯಾಗಿವೆ. ಈಜಿಪ್ಟ್‌ನ ಅರಮನೆ ಸಭಾಸದರು, ಉನ್ನತ ಅಧಿಕಾರಿಗಳನ್ನು ಶವಸಂಸ್ಕಾರ ನಡೆಸುವ ಸ್ಥಳವನ್ನು “ನೈಕ್ರೊಪೊಲಿಸ್” ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News