ಇರಾನ್: ಮತ್ತೆ ಭೂಕಂಪ; ಸಾವು-ನೋವಿಲ್ಲ

Update: 2017-12-21 17:45 GMT

ಟೆಹರಾನ್, ಡಿ. 21: ರಿಕ್ಟರ್ ಮಾಪಕದಲ್ಲಿ 5.2ರ ತೀವ್ರತೆಯನ್ನು ಹೊಂದಿದ ಭೂಕಂಪ ಇರಾನ್ ರಾಜಧಾನಿ ಟೆಹರಾನ್ ಸಮೀಪದ ಪಟ್ಟಣವೊಂದಲ್ಲಿ ಬುಧವಾರ ಸಂಭವಿಸಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.

ಆದಾಗ್ಯೂ, ಭೂಕಂಪದಿಂದ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಅಥವಾ ಭಾರೀ ಪ್ರಮಾಣದಲ್ಲಿ ವಿನಾಶ ಉಂಟಾಗಿರುವ ಬಗ್ಗೆ ವರದಿಗಳು ಬಂದಿಲ್ಲ.

ಬುಧವಾರ ರಾತ್ರಿ 7 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ತಿಂಗಳು ನಡೆದ 7.3ರ ತೀವ್ರತೆಯ ಭೂಕಂಪದಲ್ಲಿ 620ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News