ಅಮೆರಿಕ: ಫೆ.23ರಂದು ಮೊದಲ ಬಾರಿಗೆ ಬಾರತೀಯ ಅಮೆರಿಕನ್ ಗೆ ಗಲ್ಲು

Update: 2018-01-11 17:55 GMT

ವಾಶಿಂಗ್ಟನ್, ಜ. 11: ಒಂದು ಮಗು ಹಾಗೂ ಅಜ್ಜಿಯನ್ನು ಕೊಂದ ಪ್ರಕರಣದಲ್ಲಿ ಮರಣ ದಂಡನೆಗೆ ಒಳಗಾಗಿರುವ ಭಾರತೀಯ-ಅಮೆರಿಕನ್ ಕೈದಿಯೊಬ್ಬನನ್ನು ಫೆಬ್ರವರಿ 23ರಂದು ಗಲ್ಲಿಗೇರಿಸಲಾಗುವುದು ಎಂದು ಅಮೆರಿಕದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

32 ವರ್ಷದ ರಘುನಂದನ್ ಯಂಡಮೂರಿ 61 ವರ್ಷದ ಭಾರತೀಯ ಮಹಿಳೆ ಮತ್ತು ಅವರ 10 ತಿಂಗಳ ಮೊಮ್ಮಗಳನ್ನು ಅಪಹರಿಸಿ ಕೊಂದ ಪ್ರಕರಣದಲ್ಲಿ ದೋಷಿಯಾಗಿದ್ದಾನೆ.

ಆತನಿಗೆ 2014ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.

ಭಾರತೀಯ ಅಮೆರಿಕನೊಬ್ಬನನ್ನು ಅಮೆರಿಕದಲ್ಲಿ ಗಲ್ಲಿಗೇರಿಸುವುದು ಇದೇ ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News