ವಲಸಿಗರಿಗೆ ಕೌಶಲ, ಉದ್ಯೋಗ, ಇಂಗ್ಲಿಷ್ ಅಗತ್ಯ

Update: 2018-01-17 15:01 GMT

ವಾಶಿಂಗ್ಟನ್, ಜ. 17: ಕೌಶಲಭರಿತ, ಉದ್ಯೋಗಸ್ಥ ಮತ್ತು ಇಂಗ್ಲಿಷ್ ಮಾತನಾಡಬಲ್ಲ ವಲಸಿಗರನ್ನು ಸೇರಿಸಿಕೊಳ್ಳುವುದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ದೇಶದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಂಪ್ ಈಗಾಗಲೇ ಘೋಷಿಸಿರುವ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಯ ವಿವರಗಳನ್ನು ಅವರು ನೀಡುತ್ತಿದ್ದರು.ಈ ಅವಶ್ಯಕತೆಗಳನ್ನು ಪೂರೈಸುವ ವಲಸಿಗರು ಜಗತ್ತಿನ ಯಾವುದೇ ಮೂಲೆಯಿಂದ ಬರಬಹುದಾಗಿದೆ ಎಂದು ಅಧಿಕಾರಿ ನುಡಿದರು.

ಇಂಥ ನೀತಿಯೊಂದನ್ನು ಅಭಿವೃದ್ಧಿಪಡಿಸಿ ಅನುಷ್ಠಾನಕ್ಕೆ ತಂದರೆ, ಭಾರತದಂಥ ದೇಶಗಳ ಜನರಿಗೆ ಸಹಕಾರಿಯಾಗುತ್ತದೆ ಎಂದರು.

ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಟ್ರಂಪ್ ಆಡಳಿತ ವಲಸೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಬಯಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News