ಬ್ಯಾಗೇಜ್ ಶುಲ್ಕ ತಪ್ಪಿಸಲು ತಂತ್ರಹೂಡಿ ಬಂಧನಕ್ಕೊಳಗಾದ ಪ್ರಯಾಣಿಕ!

Update: 2018-01-17 17:44 GMT
ಸಾಂದರ್ಭಿಕ ಚಿತ್ರ

ಲಂಡನ್, ಜ. 17: ಹೆಚ್ಚುವರಿ ಬ್ಯಾಗೇಜ್ ಶುಲ್ಕವನ್ನು ತಪ್ಪಿಸುವುದಕ್ಕಾಗಿ ತನ್ನಲ್ಲಿದ್ದ ಎಲ್ಲಾ ಬಟ್ಟೆಗಳನ್ನು ಧರಿಸಿ ಬಂದ ಬ್ರಿಟಿಶ್ ಪ್ರಯಾಣಿಕನೊಬ್ಬನನ್ನು ಐಸ್‌ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ.

ಐಸ್‌ಲ್ಯಾಂಡ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ರಯಾನ್ ಕಾರ್ನಿ ವಿಲಿಯಮ್ಸ್‌ಗೆ ಐಸ್‌ಲ್ಯಾಂಡ್‌ನ ಕೆಫ್ಲವಿಕ್ ವಿಮಾನ ನಿಲ್ದಾಣದಲ್ಲಿ ಬುಧವಾರ ಬ್ರಿಟಿಶ್ ಏರ್‌ವೇಸ್ ವಿಮಾನ ಏರುವ ಪಾಸ್ ನೀಡಲು ನಿರಾಕರಿಸಿತು ಎನ್ನಲಾಗಿದೆ.

ಒಂದೇ ಬ್ಯಾಗ್‌ನಲ್ಲಿ ಬಟ್ಟೆಗಳನ್ನು ಇಡಲು ಸಾಧ್ಯವಾಗದಿದ್ದಾಗ, ಉಳಿದ ಬಟ್ಟೆಗಳನ್ನು ಅವರು ಧರಿಸಿಕೊಂಡಿದ್ದರು ಎನ್ನಲಾಗಿದೆ.

ಆದರೆ, ಆತನನ್ನು ಬಂಧಿಸಿದ್ದು ಎಲ್ಲ ಬಟ್ಟೆಗಳನ್ನು ಧರಿಸಿರುವುದಕ್ಕಾಗಿ ಅಲ್ಲ, ಅನುಚಿತ ವರ್ತನೆಗಾಗಿ ಎಂದು ಬ್ರಿಟಿಶ್ ಏರ್‌ವೇಸ್ ಹೇಳಿದೆ.ಕೊನೆಗೆ, ನಾರ್ವೆ ವಿಮಾನದಲ್ಲಿ ಅವರು ಬ್ರಿಟನ್ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News