ಅಫ್ಘಾನ್‌ನ ಶೇ.70ರಷ್ಟು ಜಿಲ್ಲೆಗಳಲ್ಲಿ ತಾಲಿಬಾನ್ ಸಕ್ರಿಯ: ಬಿಬಿಸಿ ವರದಿ

Update: 2018-01-31 17:58 GMT

ವಾಶಿಂಗ್ಟನ್,ಜ.31: ಅಫ್ಘಾನಿಸ್ತಾನದ ಶೇ.70ರಷ್ಟು ಜಿಲ್ಲೆಗಳಲ್ಲಿ ತಾಲಿಬಾನ್ ಬಂಡು ಕೋರರು ಸಕ್ರಿಯರಾಗಿದ್ದಾರೆಂದು ಬಿಬಿಸಿ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ. ಈ 70 ಜಿಲ್ಲೆಗಳ ಪೈಕಿ ಶೇ.4ರಷ್ಟು ಜಿಲ್ಲೆಗಳ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಹೊಂದಿದ್ದು, ಉಳಿದ ಶೇ.66 ಜಿಲ್ಲೆಗಳಲ್ಲಿ ಅದು ಭೌತಿಕವಾಗಿ ಅಸ್ತಿತ್ವವನ್ನು ಹೊಂದಿದೆಯೆಂದು ವರದಿ ತಿಳಿಸಿದೆ.

     ಅಫ್ಘಾನಿಸ್ತಾನದ ಎಲ್ಲಾ ಜಿಲ್ಲೆಗಳ 1200ಕ್ಕೂ ಅಧಿಕ ಸ್ಥಳೀಯ ಮೂಲಗಳನ್ನು ವೈಯಕ್ತಿಕ ವಾಗಿ ಸಂದರ್ಶಿಸಿ,ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ತಾನು ಈ ವರದಿಯನ್ನು ಸಿದ್ಧಪ ಡಿಸಿರುವುದಾಗಿ ಬಿಬಿಸಿ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಪ್ರಾಬಲ್ಯದ ಬಗ್ಗೆ ನ್ಯಾಟೊ ನೇತೃತ್ವದ ಸೇನಾ ಮೈತ್ರಿಕೂಟ ತೀರಾ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರಕಟಿಸಲಾದ ಅಂಕಿಅಂಶಗಳಿಗಿಂತಲೂ ಇದು ಗಣನೀಯವಾಗಿ ಅಧಿಕವಾಗಿದೆ. 2017ರ ಅಕ್ಟೋಬರ್ ತಿಂಗಳಿನಿಂದೀಚೆಗೆ ತಾಲಿಬಾನ್ ಅಫ್ಘಾನಿಸ್ತಾನದ ಶೇ.44 ಜಿಲ್ಲೆಗಳಲ್ಲಿ ಮಾತ್ರ ಅ್ತಸ್ತಿತ್ವದಲ್ಲಿದೆ ಅಥವಾ ನಿಯಂತ್ರಣ ಹೊಂದಿದೆಯೆಂದು ನ್ಯಾಟೊ ವರದಿ ಮಾಡಿತ್ತು.

ಕಳೆದ 9 ದಿನಗಳಿಂದ ಆ ದೇಶವು ಸರಣಿ ಹಿಂಸಾತ್ಮಕ ಘಟನೆ ಗಳಿಗೆ ಸಾಕ್ಷಿಯಾಗಿದೆ. ಜನವರಿ 28ರಂದು ಕಾಬೂಲ್ ನಗರದ ಕೇಂದ್ರ ಸ್ಥಳದಲ್ಲಿ ಆ್ಯಂಬು ಲೆನ್ಸ್‌ನಲ್ಲಿ ಇರಿಸಲಾಗಿದ್ದ ಬಾಂಬೊಂದು ಸ್ಪೋಟಿಸಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

        ಅಫ್ಘಾನಿಸ್ತಾನ ಸರಕಾರವು 122 ಜಿಲ್ಲೆಗಳಲ್ಲಿ ಅಂದರೆ ದೇಶದ 30ರಷ್ಟು ಭಾಗದ ಮೇಲೆ ಸಂಪೂರ್ಣನಿಯಂತ್ರಣ ಹೊಂದಿದ್ದರೂ, ತಾಲಿಬಾನ್ ದಾಳಿಗಳಿಂದ ಆ ಪ್ರದೇಶವು ಮುಕ್ತವಾಗಿಲ್ಲವೆಂದು ಬಿಬಿಸಿ ವರದಿ ತಿಳಿಸಿದೆ. ಕಾಬೂಲ್ ಮತ್ತಿತರ ಪ್ರಮುಖ ನಗರಗಳ ಮೇಲೆ ತಾಲಿಬಾನ್ ತನ್ನ ದಾಳಿಗಳನ್ನು ನಿರಂತರವಾಗಿ ಮುಂದುವರಿಸಿದೆಯೆಂದು ಅದು ಹೇಳಿದೆ. ಇನ್ನೊಂದು ಭಯೋತ್ಪಾದಕ ಗುಂಪು ಐಸಿಸ್ ಅಫ್ಘಾನಿಸ್ತಾನದ 30 ಜಿಲ್ಲೆಗಳಲ್ಲಿ ಅಸ್ತಿತ್ವ ಹೊಂದಿದ್ದರೂ ಅದು ಅವುಗಳ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲವೆಂದು ಬಿಬಿಸಿ ಅಧ್ಯಯನ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News