ಇನ್ಫೋಸಿಸ್‌ಗೆ ಅಮೆರಿಕ ವಿದೇಶ ಕಾರ್ಯದರ್ಶಿ ಶ್ಲಾಘನೆ

Update: 2018-06-23 17:33 GMT

ವಾಶಿಂಗ್ಟನ್, ಜೂ. 23: ಅಮೆರಿಕದಲ್ಲಿ ಮುಂದಿನ 2 ವರ್ಷಗಳಲ್ಲಿ 10,000 ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳಿಗಾಗಿ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿ ಇನ್ಫೋಸಿಸ್‌ನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಶ್ಲಾಘಿಸಿದ್ದಾರೆ.

‘ಅಮೆರಿಕ ಹೂಡಿಕೆ ಶೃಂಗ ಸಭೆ’ಯಲ್ಲಿ ಮಾತನಾಡಿದ ಅವರು ಇನ್ಫೋಸಿಸ್‌ನ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಈ ರೀತಿಯ ಸಮೃದ್ಧಿಯನ್ನು ಸೃಷ್ಟಿಸುವ ಉದ್ಯಮ ವಾತಾವರಣ ನಿರ್ಮಾಣಕ್ಕಾಗಿ ಟ್ರಂಪ್ ಆಡಳಿತ ಬದ್ಧವಾಗಿದೆ ಎಂದು ಪಾಂಪಿಯೊ ಹೇಳಿದರು.

‘‘ಮುಂದಿನ ಎರಡು ವರ್ಷಗಳಲ್ಲಿ 10,000 ಅಮೆರಿಕನ್ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯ ಭಾಗವಾಗಿ, 2021ರ ವೇಳೆಗೆ ತನ್ನ ರ್ಯಾಲೇ ಕೇಂದ್ರಕ್ಕೆ 2,000 ಅಮೆರಿಕನ್ನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಇನ್ಫೊಸಿಸ್ ಉದ್ದೇಶಿಸಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News