×
Ad

ದಕ್ಷಿಣ ಚೀನಾ ಸಮುದ್ರದಲ್ಲಿನ ವರ್ತನೆಯನ್ನು ಮೆದುಗೊಳಿಸಿ: ಚೀನಾವನ್ನು ಒತ್ತಾಯಿಸಿದ ಡುಟರ್ಟ್

Update: 2018-08-15 23:50 IST

ಮನಿಲಾ (ಫಿಲಿಪ್ಪೀನ್ಸ್), ಆ. 15: ದಕ್ಷಿಣ ಚೀನಾ ಸಮುದ್ರದಲ್ಲಿನ ತನ್ನ ವರ್ತನೆಯನ್ನು ಮೆದುಗೊಳಿಸುವಂತೆ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಚೀನಾವನ್ನು ಒತ್ತಾಯಿಸಿದ್ದಾರೆ.

ವಿವಾದಾತ್ಮಕ ಜಲಪ್ರದೇಶಗಳಲ್ಲಿ ದ್ವೀಪಗಳನ್ನು ನಿರ್ಮಿಸುವ ಚೀನಾದ ಕಾರ್ಯಕ್ರಮವನ್ನು ಅವರು ಟೀಕಿಸುತ್ತಿರುವುದು ಭಾರೀ ಅಪರೂಪವಾಗಿದೆ.

ಈವರೆಗೆ ಅಮೆರಿಕಕ್ಕೆ ಸಡ್ಡು ಹೊಡೆಯುತ್ತಿದ್ದ ಅವರು, ಮೊದಲ ಬಾರಿ ಚೀನಾದ ವಿರುದ್ಧವಾಗಿ ಮಾತನಾಡಿದ್ದಾರೆ.

ಮಾನವ ನಿರ್ಮಿತ ದ್ವೀಪಗಳ ಮೇಲಿನ ವಾಯು ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳಲು ಚೀನಾಕ್ಕೆ ಅಧಿಕಾರವಿಲ್ಲ ಎಂದು ಮಂಗಳವಾರ ರಾತ್ರಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಡುಟರ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News