ಉಗ್ರವಾದಿ ಸಂಘಟನೆಯಿಂದ ಸಿರಿಯಾದಲ್ಲಿ ಕೆಮಿಕಲ್ ದಾಳಿ: ರಶ್ಯಾ

Update: 2018-08-25 17:57 GMT

ಇದ್ಲಿಬ್, ಆ.25: ಬಂಡುಕೋರರ ನಿಯಂತ್ರಣದಲ್ಲಿರುವ ಸಿರಿಯದ ಪ್ರಾಂತದ ಮೇಲೆ ಉಗ್ರರು ಕೆಮಿಕಲ್ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ರಶ್ಯಾದ ಭದ್ರತಾ ಸಚಿವಾಲಯ ತಿಳಿಸಿದೆ.

ಸಿರಿಯದ ಇದ್ಲಿಬ್ ಪ್ರಾಂತದ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಲು ಲೆವಂಟ್ ಲಿಬರೇಶನ್ ಕಮಿಟಿ ಯೋಜನೆ ರೂಪಿಸಿದ್ದು ಈ ದಾಳಿಯ ಹೊಣೆಯನ್ನು ಸಿರಿಯ ಸರಕಾರದ ಮೇಲೆ ಹೊರಿಸಲು ಬಯಸಿದೆ ಎಂದು ರಶ್ಯಾ ಭದ್ರತಾ ಸಚಿವಾಲಯ ಶನಿವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಈ ಮಾಹಿತಿಯನ್ನು ಸ್ಥಳೀಯ ಅನಾಮಧೇಯ ಮೂಲದಿಂದ ಪಡೆದಿರುವುದಾಗಿ ತಿಳಿಸಿರುವ ಸಚಿವಾಲಯ, ಸಿರಿಯದಲ್ಲಿ ಕ್ಲೋರಿನ್ ತುಂಬಿರುವ ಹಲವು ಪೆಟ್ಟಿಗೆಗಳನ್ನು ಸ್ಥಳೀಯ ಪಟ್ಟಣಕ್ಕೆ ಸಾಗಿಸಿ ನಂತರ ಅಲ್ಲಿಂದ ಸಮೀಪದ ಗ್ರಾಮಕ್ಕೆ ರವಾನಿಸಲಾಗಿದೆ ಎಂದು ಪ್ರತಿಪಾದಿಸಿದೆ. ಬಂಡುಕೋರರ ಈ ಯೋಜನೆಯಲ್ಲಿ ಖಾಸಗಿ ಬ್ರಿಟಿಶ್ ಗುತ್ತಿಗೆದಾರ ಅವರಿಗೆ ನೆರವಾಗುತ್ತಿರುವುದಾಗಿ ರಶ್ಯಾ ಸೇನೆಯು ತಿಳಿಸಿದೆ. ರಾಸಾಯನಿಕ ಅಸ್ತ್ರವನ್ನು ಬಳಸದಂತೆ ಸಿರಿಯ ಸರಕಾರಕ್ಕೆ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಎಚ್ಚರಿಕೆ ನೀಡಿದ್ದು ಒಂದು ವೇಳೆ ಪ್ರಯೋಗ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಸಿರುವ ಕೆಲವೇ ದಿನಗಳ ನಂತರ ರಶ್ಯಾ ಈ ಹೇಳಿಕೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News