ಹತ್ಯಾಕಾಂಡದಿಂದ ರೊಹಿಂಗ್ಯಾ ಮುಸ್ಲಿಮರನ್ನು ರಕ್ಷಿಸಲು ಸೂಕಿ ವಿಫಲ: ತನಿಖಾ ತಂಡ

Update: 2018-08-28 17:55 GMT

 ಢಾಕಾ (ಬಾಂಗ್ಲಾದೇಶ), ಆ. 28: ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥ ಮತ್ತು ಐವರು ಜನರಲ್‌ಗಳು ನಡೆಸಿದ ಹತ್ಯಾಕಾಂಡದಿಂದ ರೊಹಿಂಗ್ಯಾ ಮುಸ್ಲಿಮರನ್ನು ರಕ್ಷಿಸಲು ದೇಶದ ನಾಗರಿಕ ನಾಯಕಿ ಆಂಗ್ ಸಾನ್ ಸೂ ಕಿ ವಿಫಲರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ವರದಿ ಆರೋಪಿಸಿದೆ.

ಹತ್ಯಾಕಾಂಡವನ್ನು ತಡೆಯಲು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂ ಕಿ, ಸರಕಾರದ ಮುಖ್ಯಸ್ಥೆಯಾಗಿ ತನ್ನ ಅಧಿಕಾರವನ್ನೂ ಬಳಸಲಿಲ್ಲ, ತನ್ನ ನೈತಿಕ ಪ್ರಾಬಲ್ಯವನ್ನೂ ಬಳಸಲಿಲ್ಲ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News