ಸೌದಿ ಗಡಿಪ್ರದೇಶದ ನಗರದ ಮೇಲೆ ಹೌದಿ ಬಂಡುಕೋರರಿಂದ ಕ್ಷಿಪಣಿ ದಾಳಿ: ವಿಫಲಗೊಳಿಸಿದ ಸೌದಿ ಪಡೆಗಳು

Update: 2018-09-16 17:53 GMT

  ರಿಯಾದ್, ಸೆ.16: ಹೌದಿ ಬಂಡುಕೋರರು. ಶನಿವಾರ ಸೌದಿಯ ಗಡಿಭಾಗದ ನಗರವಾದ ಜಝಾನ್ ಮೇಲೆ ಎಸೆದ ಕ್ಷಿಪಣಿಯನ್ನು ಸೌದಿ ಪಡೆಗಳು ತಡೆದು, ನಾಶಪಡಿಸಿರುವುದಾಗಿ ಸೌದಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  ಸೌದಿಯ ವಾಯುಪಡೆ, ಶನಿವಾರ ಸಂಜೆ ಹೌದಿ ಬಂಡುಕೋರರ ಎಸೆದ ಕ್ಷಿಪಣಿಯನ್ನು ತಡೆದು ನಾಶಪಡಿಸಿವೆ ಎಂದು ಮೈತ್ರಿಕೂಟದ ವಕ್ತಾರ ತುರ್ಕಿ ಅಲ್ ಮಲಿಕಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಶನಿವಾರ ದಾಳಿಯೊಂದಿಗೆ ಯೆಮೆನ್ ನೆಲದಿಂದ ಬಂಡುಕೋರರು, ಈತನಕ ಸೌದಿಯ ನಗರಗಳ ಮೇಲೆ ಎಸೆದಿರುವ ಕ್ಷಿಪಣಿಗಳ ಸಂಖ್ಯೆ 196ಕ್ಕೇರಿದೆ. ಈ ಕ್ಷಿಪಣಿಗಳ ಪೈಕಿ ಹೆಚ್ಚಿನವುಗಳನ್ನು ಸೌದಿ ಪಡೆಗಳು , ನಾಶಪಡಿಸಿ, ಯಾವುದೇ ಹಾನಿಯುಂಟಾಗುವುದನ್ನು ತಪ್ಪಿಸಿವೆ.

2015ರಿಂದೀಚೆಗೆ ಯೆಮೆನ್‌ನ ಹುದಿ ಬಂಡುಕೋರರ ವಿರುದ್ಧ ನಡೆಯುತ್ತಿರುವ ಸಮರದ ನೇತತ್ವವನ್ನು ಸೌದಿ ಆರೇಬಿಯ ವಹಿಸಿಕೊಂಡಿದೆ. ಯೆಮೆನ್‌ನಲ್ಲಿ ತಮ್ಮ ನಿಯಂತ್ರಣದ ಪ್ರದೇಶದಲ್ಲಿರುವ ಮೇಲೆ ಸೌದಿ ನೇತೃತ್ವದ ಮಿತ್ರಪಡೆಗಳು ವಾಯುದಾಳಿ ನಡೆಸುತ್ತಿರುವುದಕ್ಕೆ ಪ್ರತೀಕಾರವಾಗಿ ತಾವು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವುದಾಗಿ ಹೌದಿ ಬಂಡುಕೋರರು ಹೇಳಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News