ಅಮೆರಿಕ ಪ್ರಯಾಣದ ವಿರುದ್ಧ ಪ್ರಜೆಗಳಿಗೆ ಚೀನಾ ಎಚ್ಚರಿಕೆ

Update: 2019-06-04 17:44 GMT

ಬೀಜಿಂಗ್, ಜೂ. 4: ಅಮೆರಿಕಕ್ಕೆ ಪ್ರಯಾಣಿಸುತ್ತಿರುವ ತನ್ನ ನಾಗರಿಕರಿಗಾಗಿ ಚೀನಾ ಮಂಗಳವಾರ ಎರಡು ಪ್ರಯಾಣ ಎಚ್ಚರಿಕೆಗಳನ್ನು ಹೊರಡಿಸಿದೆ.

 ‘‘ಇತ್ತೀಚೆಗೆ ಅಮೆರಿಕದಲ್ಲಿ ಗುಂಡು ಹಾರಾಟಗಳು, ದರೋಡೆಗಳು ಮತ್ತು ಕಳ್ಳತನಗಳು ಆಗಾಗ್ಗೆ ನಡೆಯುತ್ತಿವೆ’’ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಹೊರಡಿಸಿದ ಹೇಳಿಕೆಯೊಂದನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮ ವರದಿ ಮಾಡಿದೆ.

 ಅಮೆರಿಕ ಮತ್ತು ಚೀನಾಗಳ ನಡುವಿನ ಹೆಚ್ಚುತ್ತಿರುವ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ಚೀನಾ ಈ ಎಚ್ಚರಿಕೆಗಳನ್ನು ಹೊರಡಿಸಿದೆ.

ಅಮೆರಿಕದಲ್ಲಿರುವ ಚೀನಾ ಪ್ರಜೆಗಳಿಗೆ ಕಿರುಕುಳ ನೀಡುವುದಕ್ಕಾಗಿ ಅಮೆರಿಕದ ಕಾನೂನು ಅನುಷ್ಠಾನ ಸಂಸ್ಥೆಗಳು ವಲಸೆ ಮತ್ತು ‘ಆನ್‌ಸೈಟ್ ಇಂಟರ್‌ವ್ಯೆ’ ಮುಂತಾದ ವಿಧಾನಗಳನ್ನು ಪದೇ ಪದೇ ಬಳಸುತ್ತಿವೆ ಎಂಬುದಾಗಿ ಇನ್ನೊಂದು ಎಚ್ಚರಿಕೆಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News