ನ್ಯೂಯಾರ್ಕ್ ಗಗನಚುಂಬಿ ಕಟ್ಟಡಕ್ಕೆ ಹೆಲಿಕಾಪ್ಟರ್ ಢಿಕ್ಕಿ: ಪೈಲಟ್ ಸಾವು

Update: 2019-06-11 18:15 GMT

ನ್ಯೂಯಾರ್ಕ್, ಜೂ. 11: ಅಮೆರಿಕದ ಮ್ಯಾನ್‌ಹಟನ್ ನಗರ ಮಧ್ಯದ ಗಗನಚುಂಬಿ ಕಟ್ಟಡವೊಂದರ ಮೇಲ್ಛಾವಣಿಗೆ ಸೋಮವಾರ ಹೆಲಿಕಾಪ್ಟರೊಂದು ಢಿಕ್ಕಿ ಹೊಡೆಯಿತು. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಈ ಘಟನೆಯು 2001 ಸೆಪ್ಟಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ನಡೆದ ಭಯೋತ್ಪಾದಕ ವಿಮಾನ ದಾಳಿಯನ್ನು ನೆನಪಿಸಿತು ಹಾಗೂ ಜನರು ತತ್ತರಿಸಿದರು.

ಮಂಜು ಕವಿದ ವಾತಾವರಣದ ಹಿನ್ನೆಲೆಯಲ್ಲಿ ಪೈಲಟ್‌ಗೆ ಎದುರಿನ ದೃಶ್ಯಗಳು ಕಾಣಿಸದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಟೈಮ್ಸ್ ಸ್ಕ್ವೇರ್‌ನಿಂದ ಅನತಿ ದೂರದಲ್ಲಿರುವ 229 ಮೀಟರ್ ಎತ್ತರದ ಕಟ್ಟಡದ ತುದಿಗೆ ಅಪರಾಹ್ನ ಎರಡು ಗಂಟೆಯ ಸುಮಾರಿಗೆ ಹೆಲಿಕಾಪ್ಟರ್ ಅಪ್ಪಳಿಸಿತು. ಈ ಸಂದರ್ಭದಲ್ಲಿ ಮಳೆ ಸುರಿಯುತ್ತಿತ್ತು ಹಾಗೂ ವಾತಾವರಣವು ಮಂಜಿನಿಂದ ಕೂಡಿತ್ತು.

ಮೃತಪಟ್ಟ ವ್ಯಕ್ತಿ ಹೆಲಿಕಾಪ್ಟರ್‌ನ ಪೈಲಟ್ ಆಗಿರಬಹುದು ಎಂಬುದಾಗಿ ಭಾವಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯೂಯಾರ್ಕ್ ನಗರ ಮೇಯರ್ ಬಿಲ್ ಡಿ ಬ್ಲಾಸಿಯೊ ಹೇಳಿದರು.

ಕಟ್ಟಡದಲ್ಲಿದ್ದ ಜನರಿಗಾಗಲಿ, ನೆಲದ ಮೇಲಿದ್ದ ಜನರಿಗಾಗಲಿ ಯಾವುದೇ ಅಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News