ಪರಮಾಣು ಒಪ್ಪಂದ ಉಳಿಸಲು ಹೆಚ್ಚು ಸಮಯಾವಕಾಶವಿಲ್ಲ: ಇರಾನ್

Update: 2019-09-07 18:14 GMT

ಟೆಹರಾನ್, ಸೆ. 7: ಜಾಗತಿಕ ಶಕ್ತ ದೇಶಗಳೊಂದಿಗೆ 2015ರಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದವನ್ನು ಉಲ್ಲಂಘಿಸಿ, ಇರಾನ್ ಸುಧಾರಿತ ಸೆಂಟ್ರಿಫ್ಯೂಜ್‌ಗಳಿಗೆ ಯುರೇನಿಯಂ ಅನಿಲವನ್ನು ತುಂಬಿಸುವ ಕಾರ್ಯವನ್ನು ಆರಂಭಿಸಿದೆ ಎಂದು ಆ ದೇಶದ ವಕ್ತಾರರೊಬ್ಬರು ಶನಿವಾರ ಹೇಳಿದ್ದಾರೆ.

ಟೆಲಿವಿಶನ್ ನೇರಪ್ರಸಾರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿದ ಇರಾನ್ ಪರಮಾಣು ಇಂಧನ ಸಂಸ್ಥೆಯ ಬೆಹ್ರೂಝ್ ಕಮಲ್ವಂಡಿ ಈ ವಿಷಯವನ್ನು ತಿಳಿಸಿದರು. ಸುಧಾರಿತ ಸೆಂಟ್ರಿಫ್ಯೂಜ್‌ಗಳಿರುವ ವೇದಿಕೆಯೊಂದರಲ್ಲಿ ಅವರು ಮಾತನಾಡಿದರು.

ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳಲು ಯುರೋಪ್‌ಗೆ ಹೆಚ್ಚಿನ ಸಮಯಾವಕಾಶವಿಲ್ಲ ಎಂದು ಕಮಲ್ವಂಡಿ ಎಚ್ಚರಿಸಿದರು.

ಬುಡಕಟ್ಟು ಜನರ ಗುಡಿಸಲು ‘ಮಲೋಕ’ದಲ್ಲಿ ಕೊಲಂಬಿಯ ಅಧ್ಯಕ್ಷ ಇವಾನ್ ಡೂಕ್ ಅಮೆಝಾನ್ ಸಭೆಯನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News