×
Ad

ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್ ಗೆ ಪ್ರತಿಷ್ಠಿತ ‘ವಿಂಧಾಮ್ ಕ್ಯಾಂಬೆಲ್’ ಪ್ರಶಸ್ತಿ ಪ್ರದಾನ

Update: 2019-09-20 14:10 IST

ಹೊಸದಿಲ್ಲಿ, ಮಾ. 14: thewire.in ವೆಬ್ ತಾಣದ ಹಿರಿಯ ಸಲಹಾ ಸಂಪಾದಕ ಮತ್ತು ಮಾಜಿ ಬ್ಯುರೋ ಮುಖ್ಯಸ್ಥ ರಘು ಕಾರ್ನಾಡ್ ಅವರಿಗೆ ಯೇಲ್ ಯುನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2019ನೇ ಸಾಲಿನ ಪ್ರತಿಷ್ಠಿತ ‘ವಿಂಧಾಮ್ ಕ್ಯಾಂಬೆಲ್’ ಪ್ರಶಸ್ತಿ ಪ್ರದಾನಿಸಲಾಯಿತು.

ಅವರ ‘ಫಾರ್ದೆಸ್ಟ್ ಫೀಲ್ಡ್: ಆ್ಯನ್ ಇಂಡಿಯನ್ ಸ್ಟೋರಿ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್’ (Farthest Field: An Indian Story of the Second World War) ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಕೃತಿಯನ್ನು 2016ರಲ್ಲಿ ಹಾರ್ಪರ್ ಕಾಲಿನ್ಸ್ ಪ್ರಕಟಿಸಿತ್ತು.

ಯೇಲ್ ವಿವಿ ನೀಡುವ ಈ  ಪ್ರಶಸ್ತಿಗೆ ರಘು ಸಹಿತ ಎಂಟು ಮಂದಿ ಪಾತ್ರವಾಗಿದ್ದಾರೆ. ಪ್ರಶಸ್ತಿ ಜೊತೆ ತಲಾ $ 165,000 ( ಒಂದೂ ಕಾಲು ಕೋಟಿ ರೂ.) ನಗದು ಬಹುಮಾನವಿದೆ.

ರಘು ಕಾರ್ನಾಡ್ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News