ಇರಾಕ್ ಪ್ರಧಾನಿಯಿಂದ ರಾಜೀನಾಮೆ ಘೋಷಣೆ

Update: 2019-11-29 17:16 GMT
ಫೋಟೋ ಕೃಪೆ : facebook.com/Adil.Abd.Al.Mahdi1/

ಬಗ್ದಾದ್, ನ. 29: ದೇಶದ ಉನ್ನತ ಶಿಯಾ ಧರ್ಮ ಗುರುವಿನ ಇಚ್ಛೆಯಂತೆ ನಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ ಎಂದು ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹದಿ ಶುಕ್ರವಾರ ಘೋಷಿಸಿದ್ದಾರೆ.

ಸುಮಾರು ಎರಡು ತಿಂಗಳುಗಳ ಸರಕಾರ ವಿರೋಧಿ ಪ್ರತಿಭಟನೆಗಳ ಬಳಿಕ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪ್ರತಿಭಟನೆಗಳಲ್ಲಿ ಈವರೆಗೆ 400ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಧಾನಿಯ ಲಿಖಿತ ಹೇಳಿಕೆಯನ್ನು ರಾಜಧಾನಿ ಬಗ್ದಾದ್‌ನ ತಹ್ರೀರ್ ಚೌಕದಲ್ಲಿ ನೆರೆದ ಪ್ರತಿಭಟನಕಾರರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು. ‘ಭ್ರಷ್ಟ ಹಾಗೂ ಅಸಮರ್ಥ’ ಆಡಳಿತ ವರ್ಗದ ವಿರುದ್ಧ ಪ್ರತಿಭಟಿಸುವುದಕ್ಕಾಗಿ ಐತಿಹಾಸಿಕ ತಹ್ರೀರ್ (ಸ್ವಾತಂತ್ರ್ಯ) ಚೌಕದಲ್ಲಿ ಜನರು ಅಕ್ಟೋಬರ್ ತಿಂಗಳ ಮೊದಲಿನಿಂದಲೂ ಜಮಾಯಿಸಿದ್ದಾರೆ.

‘‘ಪ್ರಧಾನಿ ಹುದ್ದೆಗೆ ನಾನು ನೀಡುವ ರಾಜೀನಾಮೆಯನ್ನು ಸ್ವೀಕರಿಸುವಂತೆ ಕೋರಿ ನಾನು ಗೌರವಾನ್ವಿತ ಸಂಸತ್ತಿಗೆ ಔಪಚಾರಿಕ ಪತ್ರವೊಂದನ್ನು ಬರೆಯುತ್ತೇನೆ’’ ಎಂದು ಅಬ್ದುಲ್ ಮಹದಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News