ಸಾರ್ವಭೌಮತೆಯನ್ನು ಎತ್ತಿ ಹಿಡಿಯಿರಿ: ಇರಾಕ್‌ಗೆ ಅಮೆರಿಕ ಒತ್ತಾಯ

Update: 2020-01-28 16:18 GMT

ವಾಶಿಂಗ್ಟನ್, ಜ. 28: ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ‘ದಾಳಿಗಳನ್ನು’ ನಡೆಸುತ್ತಿರುವ ಹಿನ್ನೆಲೆಯಲ್ಲಿ, ನಿಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯಿರಿ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹದಿಯನ್ನು ಒತ್ತಾಯಿಸಿದ್ದಾರೆ.

‘‘ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್‌ನ ಸಶಸ್ತ್ರ ಗುಂಪುಗಳು ನಡೆಸುತ್ತಿರುವ ನಿರಂತರ ಆಕ್ರಮಣಗಳ’’ ಬಗ್ಗೆ ಪಾಂಪಿಯೊ ತನ್ನ ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಿಕೆಯೊಂದರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

‘‘ಈ ದಾಳಿಗಳು ಇರಾಕ್‌ನ ಸಾರ್ವಭೌಮತೆಯ ಬಗ್ಗೆ ಹೊಂದಿರುವ ದಿವ್ಯ ನಿರ್ಲರ್ಕ್ಷ ಹಾಗೂ ಈ ಅಪಾಯಕಾರಿ ಸಶಸ್ತ್ರ ಗುಂಪುಗಳನ್ನು ನಿಯಂತ್ರಿಸುವಲ್ಲಿನ ವೈಫಲ್ಯವನ್ನು ತೋರಿಸುತ್ತವೆ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News