ಅಮೆರಿಕ ಚುನಾವಣೆಯಲ್ಲಿ ರಶ್ಯದಿಂದ ಮತ್ತೆ ಹಸ್ತಕ್ಷೇಪ: ಗುಪ್ತಚರ ಅಧಿಕಾರಿಗಳಿಂದ ಎಚ್ಚರಿಕೆ

Update: 2020-02-21 17:03 GMT

ವಾಶಿಂಗ್ಟನ್, ಫೆ. 21: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮರು ಆಯ್ಕೆಯಾಗುವಂತೆ ನೋಡಿಕೊಳ್ಳಲು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ರಶ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಸಂಸದರನ್ನು ಎಚ್ಚರಿಸಿದ್ದಾರೆ.

ಆದರೆ, ಇದರಿಂದ ಆಕ್ರೋಶಗೊಂಡಿರುವ ಟ್ರಂಪ್ ತನ್ನ ಗುಪ್ತಚರ ಮುಖ್ಯಸ್ಥ ರನ್ನು ಬದಲಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಹೌಸ್ ಇಂಟಲಿಜನ್ಸ್ ಕಮಿಟಿಗೆ ಫೆಬ್ರವರಿ 13ರಂದು ಗುಪ್ತಚರ ಅಧಿಕಾರಿಗಳು ಈ ಎಚ್ಚರಿಕೆ ನೀಡಿರುವುದು ಟ್ರಂಪ್ ಗಮನಕ್ಕೆ ಬಳಿಕ, ಅವರು ನ್ಯಾಶನಲ್ ಇಂಟಲಿಜನ್ಸ್‌ನ ಉಸ್ತುವಾರಿ ನಿರ್ದೇಶಕ ಜೋಸೆಫ್ ಮ್ಯಾಗ್ವಯರ್ ವಿರುದ್ಧ ಕೆಂಡ ಕಾರಿದರು ಎಂದು ‘ವಾಶಿಂಗ್ಟನ್ ಪೋಸ್ಟ್’ ಮತ್ತು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಳು ಗುರುವಾರ ವರದಿ ಮಾಡಿವೆ.

ರಶ್ಯವು ಅಮೆರಿಕದ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಮತ್ತೊಮ್ಮೆ ಹಸ್ತಕ್ಷೇಪ ನಡೆಸುತ್ತಿದೆ ಎಂದು ಮ್ಯಾಗ್ವಯರ್ ಸಹಾಯಕ ಶೆಲ್ಬಿ ಪಿಯರ್‌ಸನ್ ಸಂಸದರಿಗೆ ತಿಳಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News