2 ದಿನಗಳ ಹಿಂಸೆಯ ಬಳಿಕ ಗಾಝಾದಲ್ಲಿ ಪರಿಸ್ಥಿತಿ ಶಾಂತ

Update: 2020-02-25 17:56 GMT

ಗಾಝಾ ಸಿಟಿ (ಫೆಲೆಸ್ತೀನ್), ಫೆ. 25: ಗಾಝಾ ಮತ್ತು ಸುತ್ತಮುತ್ತ ಇಸ್ರೇಲ್ ಮತ್ತು ಫೆಲೆಸ್ತೀನ್ ಗುಂಪೊಂದರ ನಡುವೆ ಎರಡು ದಿನಗಳ ಕಾಲ ಸಂಘರ್ಷ ನಡೆದ ಬಳಿಕ, ಮಂಗಳವಾರ ಈ ಪ್ರದೇಶದಲ್ಲಿ ಶಾಂತಿ ನೆಲೆಸಿದೆ.

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಗೆ ಒಂದು ವಾರ ಇರುವಾಗ ಹಿಂಸೆ ಸ್ಫೋಟಗೊಳ್ಳಬಹುದು ಎಂಬ ಭೀತಿಯನ್ನು ಈ ಸಂಘರ್ಷ ಸೃಷ್ಟಿಸಿತ್ತು.

ಮಂಗಳವಾರ ಬೆಳಗ್ಗೆ ಫೆಲೆಸ್ತೀನ್ ಪ್ರದೇಶದಿಂದ ಯಾವುದೇ ರಾಕೆಟ್ ಹಾರಾಟ ನಡೆದಿಲ್ಲ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇಸ್ರೇಲ್ ಕೂಡ ಯಾವುದೇ ದಾಳಿ ನಡೆಸಿಲ್ಲ ಎಂದು ಗಾಝಾದಲ್ಲಿರುವ ಎಎಫ್‌ಪಿ ಸುದ್ದಿ ಸಂಸ್ಥೆಯ ವರದಿಗಾರರು ಹೇಳಿದ್ದಾರೆ.

ಫೆಲೆಸ್ತೀನ್ ಗುಂಪು ಸೋಮವಾರ ಸಂಜೆಯ ವೇಳೆಗೆ ಯುದ್ಧವಿರಾಮ ಘೋಷಿಸಿತ್ತು. ಆದರೆ, ಬಳಿಕ, ಇಸ್ರೇಲ್ ಯುದ್ಧವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅದು ಯುದ್ಧವಿರಾಮದಿಂದ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News