ಸ್ಪೇನ್: ಇನ್ನೂ 394 ಸಾವು

Update: 2020-03-23 17:39 GMT

ಮ್ಯಾಡ್ರಿಡ್ (ಸ್ಪೇನ್), ಮಾ. 23: ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್ ಕಾಯಿಲೆಯಿಂದಾಗಿ 394 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಮಾರಕ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ 1,720ಕ್ಕೆ ಏರಿದೆ.

ದೇಶದಲ್ಲಿ ಹೊಸದಾಗಿ ಸುಮಾರು 5,000 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 25,000ಕ್ಕೆ ಏರಿದೆ.

ತುರ್ತು ಪರಿಸ್ಥಿತಿ 15 ದಿನಗಳ ಕಾಲ ವಿಸ್ತರಣೆ?

ದೇಶದಲ್ಲಿ ಪ್ರಸಕ್ತ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ಇನ್ನೂ 15 ದಿನಗಳ ಅವಧಿಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ರವಿವಾರ ಹೇಳಿದ್ದಾರೆ.

ಅವರು ಆರೋಗ್ಯ ಮತ್ತು ಭದ್ರತಾ ಅಧಿಕಾರಿಗಳನ್ನು ಭೇಟಿಯಾದ ಬಳಿಕ, ಟೆಲಿವಿಶನ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News