ಬ್ರಿಟನ್: ಕೊರೋನ ವಿರುದ್ಧ ಹೋರಾಡುತ್ತಾ 8 ವೈದ್ಯರ ಸಾವು

Update: 2020-04-09 17:41 GMT

ಲಂಡನ್, ಎ. 9: ಬ್ರಿಟನ್‌ನಲ್ಲಿ ಈವರೆಗೆ ಎಂಟು ವೈದ್ಯರು ನೂತನ-ಕೊರೋನವೈರಸ್ ಸೋಂಕಿಗ ಬಲಿಯಾಗಿದ್ದಾರೆ ಹಾಗೂ ಅವರೆಲ್ಲರೂ ವಲಸಿಗರು. ಅವರು ಭಾರತ, ಈಜಿಪ್ಟ್, ನೈಜೀರಿಯ, ಪಾಕಿಸ್ತಾನ, ಶ್ರೀಲಂಕಾ ಮತ್ತು ಸುಡಾನ್ ದೇಶಗಳಿಂದ ಬಂದವರಾಗಿದ್ದಾರೆ.

ಬ್ರಿಟನ್‌ನಲ್ಲಿರುವ ವಿದೇಶಿ ವೈದ್ಯರು ಕೊರೋನವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಪೈಕಿ ಮೂರನೇ ಒಂದಕ್ಕಿಂತಲೂ ಅಧಿಕ ಮಂದಿ ವಲಸಿಗರು. ‘‘ಎನ್‌ಎಚ್‌ಎಸ್‌ನ ಮೃತ ವೈದ್ಯರ ಪೈಕಿ ಹೆಚ್ಚಿನವರು ಬದಲಾವಣೆ ತರುವುದಕ್ಕಾಗಿ ಈ ದೇಶಕ್ಕೆ ಬಂದವರು. ಅವರು ಬದಲಾವಣೆಯನ್ನು ತಂದಿದ್ದಾರೆ ಹಾಗೂ ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ. ನಾವು ಅವರಿಗೆ ವಂದಿಸುತ್ತೇವೆ’’ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News