ಸಿಂಗಾಪುರ: 250 ಭಾರತೀಯರಲ್ಲಿ ಕೊರೋನ ವೈರಸ್ ಸೋಂಕು

Update: 2020-04-10 17:54 GMT

ಸಿಂಗಾಪುರ, ಎ. 10: ಸಿಂಗಾಪುರದಲ್ಲಿ ಸುಮಾರು 250 ಭಾರತೀಯರಲ್ಲಿ ನೂತನ-ಕೊರೋನವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಇಲ್ಲಿನ ಭಾರತೀಯ ಹೈಕಮಿಶನ್ ಶುಕ್ರವಾರ ತಿಳಿಸಿದೆ.

ಸೋಂಕು ಹೊಂದಿರುವ ಬಹುತೇಕ ಭಾರತೀಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಅಥವಾ ಸುಧಾರಿಸುತ್ತಿದೆ ಎಂದು ಭಾರತೀಯ ಹೈಕಮಿಶನರ್ ಜಾವೇದ್ ಅಶ್ರಫ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ಸೋಂಕುಪೀಡಿತ ಭಾರತೀಯರಲ್ಲಿ ಸುಮಾರು ಅರ್ಧದಷ್ಟು ಮಂದಿ ವಿದೇಶಿ ಕಾರ್ಮಿಕರಿಗಾಗಿನ ಕೋಣೆಗಳಲ್ಲಿ ಗುಂಪುಗಳಲ್ಲಿ ವಾಸಿಸುತ್ತಿದ್ದರು.

ಸಿಂಗಾಪುರದಲ್ಲಿ ಗುರುವಾರ 287 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ದೃಢಪಟ್ಟಿರುವ ಒಟ್ಟು ಪ್ರಕರಣಗಳ ಸಂಖ್ಯೆ 1,910ಕ್ಕೆ ಏರಿದೆ. ದೇಶದಲ್ಲಿ ಈವರೆಗೆ ಕೇವಲ ಆರು ಕೊರೋನವೈರಸ್ ಸಾವುಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News