ಕೊರೋನ ರೋಗಿಗಳ ಚಿಕಿತ್ಸೆಗೆ ರೆಮ್‌ಡೆಸ್ವಿರ್ ಲಭ್ಯ

Update: 2020-05-04 17:48 GMT

ಹ್ಯೂಸ್ಟನ್ (ಅಮೆರಿಕ), ಮೇ 4: ಕೊರೋನ ವೈರಸ್ ರೋಗಿಗಳ ಚೇತರಿಕೆ ಅವಧಿಯನ್ನು ಕಡಿಮೆಗೊಳಿಸುತ್ತದೆ ಎನ್ನಲಾದ ವೈರಸ್ ನಿರೋಧಕ ಔಷಧ ರೆಮ್‌ಡೆಸ್ವಿರ್‌ನ್ನು ರಫ್ತು ಮಾಡಲಾಗುತ್ತಿದೆ ಹಾಗೂ ಅಮೆರಿಕ ಸರಕಾರದ ಮೂಲಕ ದೇಶದ ರೋಗಿಗಳಿಗೆ ಅದನ್ನು ನೀಡಲಾಗುತ್ತಿದೆ ಎಂದು ಔಷಧಿಯ ತಯಾರಕ ಕಂಪೆನಿ ತಿಳಿಸಿದೆ.

ಈಗ ಲಭ್ಯವಿರುವ ಸಂಪೂರ್ಣ ಪ್ರಮಾಣದ ಔಷಧಿಯನ್ನು ಕಂಪೆನಿಯು ದೇಣಿಗೆ ರೂಪದಲ್ಲಿ ನೀಡುತ್ತಿದೆ ಎಂದು ಗಿಲಿಯಡ್ ಸಯನ್ಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇನಿಯಲ್ ಒಡೇ ರವಿವಾರ ತಿಳಿಸಿದರು.

ಒಂದು ಲಕ್ಷದಿಂದ ಎರಡು ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾದ 15 ಲಕ್ಷ ವಯಲ್‌ನಷ್ಟು ಔಷಧಿ ಲಭ್ಯವಿದೆ ಎಂದು ಅವರು ತಿಳಿಸಿದರು.

ನಾವು ಔಷಧಿಯನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ರಫ್ತು ಮಾಡುತ್ತಿದ್ದೇವೆ ಎಂದು ಸಿಬಿಎಸ್ ಸುದ್ದಿ ಚಾನೆಲ್‌ನ ಫೇಸ್ ದ ನೇಶನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News