ಮಲೇಶ್ಯ ಪ್ರಧಾನಿಗೆ 14 ದಿನಗಳ ಗೃಹ ಕ್ವಾರಂಟೈನ್

Update: 2020-05-22 17:44 GMT

ಕೌಲಾಲಂಪುರ (ಮಲೇಶ್ಯ), ಮೇ 22: ಮಲೇಶ್ಯದ ಪ್ರಧಾನಿ ಮುಹಿಯುದ್ದೀನ್ ಯಾಸಿನ್ ಈ ವಾರ ನಡೆಸಿದ ಸಭೆಯೊಂದರಲ್ಲಿ ಭಾಗವಹಿಸಿದ್ದ ಓರ್ವ ಅಧಿಕಾರಿ ಕೊರೋನ ವೈರಸ್ ಸೋಂಕಿಗೆ ಒಳಗಾದ ಬಳಿಕ, ಪ್ರಧಾನಿ 14 ದಿನಗಳ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ ಎಂದು ಪ್ರಧಾನಿ ಕಚೇರಿ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ರಧಾನಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಸೋಂಕು ಪತ್ತೆಯಾಗಿಲ್ಲವಾದರೂ, ಆ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಸೋಂಕಿನ ತಪಾಸಣೆಗೆ ಒಳಪಡಬೇಕು ಹಾಗೂ 14 ದಿನಗಳ ಗೃಹ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News