ಕೊರೋನ ವೈರಸ್‌ನ ಆರ್ಥಿಕ ಹೊಡೆತ: ಇನ್ನೂ 8.6 ಕೋಟಿ ಮಕ್ಕಳು ಬಡತನದ ತೆಕ್ಕೆಗೆ

Update: 2020-05-28 17:39 GMT
ಸಾಂದರ್ಭಿಕ ಚಿತ್ರ

ವಿಶ್ವಸಂಸ್ಥೆ, ಮೇ 28: ಕೊರೋನ ವೈರಸ್ ಸಾಂಕ್ರಾಮಿಕವು ಆರ್ಥಿಕತೆಗೆ ನೀಡಿರುವ ಹೊಡೆತದ ಪರಿಣಾಮವಾಗಿ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಬಡ ಮನೆಗಳಲ್ಲಿ ವಾಸಿಸುವ ಮಕ್ಕಳ ಸಂಖ್ಯೆ 2020ರ ಕೊನೆಯ ವೇಳೆಗೆ 8.6 ಕೋಟಿಯಷ್ಟು ಹೆಚ್ಚುವ ಮೂಲಕ 67.2 ಕೋಟಿ ಆಗಲಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಆರ್ಥಿಕ ದುಷ್ಪರಿಣಾಮಗಳಿಂದಾಗಿ 2020ರ ಕೊನೆಯ ವೇಳೆಗೆ, ಹೊಸದಾಗಿ 8.6 ಕೋಟಿಗೂ ಅಧಿಕ ಮಕ್ಕಳು ಬಡತನದ ಅಂಚಿಗೆ ತಳ್ಳಲ್ಪಡಲಿದ್ದಾರೆ. ಇದು ಈಗಾಗಲೇ ಇರುವ ಸಂಖ್ಯೆಗಿಂತ 15 ಶೇಕಡದಷ್ಟು ಹೆಚ್ಚಾಗಿದೆ ಎಂದು ಯುನಿಸೆಫ್ ಮತ್ತು ಮಾನವೀಯ ಸಂಘಟನೆ ‘ಸೇವ್ ದ ಚಿಲ್ಡ್ರನ್’ ಜಂಟಿಯಾಗಿ ನಡೆಸಿರುವ ಅಧ್ಯಯನವೊಂದು ತಿಳಿಸಿದೆ.

ಸಾಂಕ್ರಾಮಿಕದ ಆರ್ಥಿಕ ಹೊಡೆತದಿಂದ ಕುಟುಂಬಗಳನ್ನು ರಕ್ಷಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗೆ ವಾಸಿಸುವ ಮಕ್ಕಳ ಸಂಖ್ಯೆ ವರ್ಷದ ಕೊನೆಯ ವೇಳೆಗೆ 67.2 ಕೋಟಿಯನ್ನು ತಲುಪಲಿದೆ ಎಂದು ಅಧ್ಯಯನವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News